ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ: ಕರಣ್‌, ಶ್ರೀನಿತಿಗೆ ಪ್ರಶಸ್ತಿ ಬೆಂಗಳೂರು: ಕರ್ನಾಟಕದ ಶ್ರೀನಿತಿ ಚೌಧರಿ ಮತ್ತು ಕೇರಳದ ಕರಣ್ ಥಾಪಾ ಅವರು ಇಲ್ಲಿ ನಡೆದ ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶುಕ್ರವಾರ ಕೊನೆಗೊಂಡ ಟೂರ್ನಿಯ ಬಾಲಕರ ಫೈನಲ್ ಪಂದ್ಯದಲ್ಲಿ ಕರಣ್‌7-6 (2), 6-2ರಿಂದ ಕರ್ನಾಟಕದ ಶ್ರೀಕಾಂತ್ ಮೆನನ್ ಅವರನ್ನು ಮಣಿಸಿದರು. ಬಾಲಕಿಯರ ವಿಭಾಗ‌ದ ಪ್ರಶಸ್ತಿ ಸುತ್ತಿನಲ್ಲಿ ಜಿಯಾ ಸಿಂಗ್‌6-0, 6-0ರಿಂದ ಜಿಯಾ ಸಿಂಗ್ ವಿರುದ್ಧ ಗೆದ್ದರು. ಶ್ರೀಕಾಂತ್ ಮತ್ತು ಜಿಯಾ ಅವರು ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಕ್ರಮವಾಗಿ ಅಗ್ರಶ್ರೇಯಾಂಕದ ಶ್ರೀಕರ್ ಡೋನಿ ಮತ್ತು ವಿ.ತನು ಅವರನ್ನು ಸೋಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.