2022: ಮರೆಗೆ ಸೋಲು, ಮೆಡ್ವೆಡೆವ್‌ಗೆ ಗೆಲುವು ನ್ಯೂಯಾರ್ಕ್‌: ಅಗ್ರ ರ‍್ಯಾಂಕ್‌ನ ಆಟಗಾರ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಪುರುಷರ ಸಿಂಗಲ್ಸ್‌ ವಿಭಾಗ ಮೂರನೇ ಸುತ್ತು ಪ್ರವೇಸಿದರು. ಮೂರನೇ ಸುತ್ತಿನಲ್ಲಿ ಅವರು 6-4, 6-2, 6-2 ರಲ್ಲಿ ಚೀನಾದ ವು ಯಿಬಿಂಗ್‌ ವಿರುದ್ಧ ಗೆದ್ದರು. ಬ್ರಿಟನ್‌ನ ಆ್ಯಂಡಿ ಮರೆ ಮೂರನೇ ಸುತ್ತಿನಲ್ಲಿ ಮುಗ್ಗರಿಸಿದರು. ಇಟಲಿಯ ಮಟೆಯೊ ಬೆರೆಟೆನಿ 6-4, 6-4, 6-7, 6-3 ರಲ್ಲಿ ಮರೆ ಅವರನ್ನು ಮಣಿಸಿದರು. ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಅಮೆರಿಕದ ಕೊಕೊ ಗಾಫ್‌ 6–2, 6–3 ರಲ್ಲಿ ತಮ್ಮದೇ ದೇಶದ ಮ್ಯಾಡಿಸನ್‌ ಕೀಸ್‌ ವಿರುದ್ಧ ಗೆದ್ದರೆ, ಟ್ಯುನಿಷಿಯಾದ ಆನ್ಸ್‌ ಜಬೇರ್‌ 4–6, 6–4, 6–3 ರಲ್ಲಿ ಅಮೆರಿಕದ ಶೆಲ್ಬಿ ರೋಜರ್ಸ್‌ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.