ನಿಕೋಲಸ್‌ಗೆ ಎಂಟು ವರ್ಷ ನಿಷೇಧ ಲಾಸನ್‌ : ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬೀತಾಗಿರುವ ಕಾರಣ ಕ್ರೀಡಾ ಆಡಳಿತಗಾರ, ತೈ ನಿಕೋಲಸ್‌ ಮೇಲೆ ಫಿಫಾ ಎಂಟು ವರ್ಷ ನಿಷೇಧ ಹೇರಿದೆ. ನಿಕೋಲಸ್‌ ಅವರು ಈ ಹಿಂದೆ ಒಸೀನಿಯಾ ಫುಟ್‌ಬಾಲ್‌ ಕಾನ್ಫೆಡರೇಷನ್‌ನ (ಒಎಫ್‌ಸಿ) ಮಹಾಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಫಿಫಾ ಸ್ಟ್ಯಾಂಡಿಂಗ್‌ ಸಮಿತಿಯ ಸದಸ್ಯರೂ ಆಗಿದ್ದರು. ‘2014ರಿಂದ 2017ರ ಅವಧಿಯಲ್ಲಿ ಫಿಫಾ, ಒಎಫ್‌ಸಿಗೆ ಬಿಡುಗಡೆ ಮಾಡಿದ್ದ ಅನುದಾನವನ್ನು ನಿಕೋಲಸ್‌ ದುರು ಪಯೋಗಪಡಿಸಿಕೊಂಡಿದ್ದಾರೆ. ಈ ಮೂಲಕ ಫಿಫಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ಎಂಟು ವರ್ಷ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಯಾವುದೇ ಫುಟ್‌ಬಾಲ್‌ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಅವರು ₹34.62 ಲಕ್ಷ ದಂಡವನ್ನೂ ಕಟ್ಟಬೇಕು’ ಎಂದು ಫಿಫಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.