ವಿಂಬಲ್ಡನ್‌ ಟೆನಿಸ್‌: ಜೊಕೊವಿಚ್– ಕಿರ್ಗಿಯೊಸ್‌ ಪೈಪೋಟಿ ಇಂದು ವಿಂಬಲ್ಡನ್‌, ಲಂಡನ್: ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಭಾನುವಾರ ನಡೆಯಲಿದ್ದು, ಸರ್ಬಿಯದ ನೊವಾಕ್‌ ಜೊಕೊವಿಚ್ ಮತ್ತು ಆಸ್ಟ್ರೇಲಿಯಾದ ನಿಕ್‌ ಕಿರ್ಗೊಯೊಸ್‌ ಪೈಪೋಟಿ ನಡೆಸುವರು. 35 ವರ್ಷದ ಜೊಕೊವಿಚ್,ಆಲ್‌ಇಂಗ್ಲೆಂಡ್‌ಕ್ಲಬ್‌ನಲ್ಲಿಏಳನೇಹಾಗೂ ವೃತ್ತಿಜೀವನದ 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ಕಿರ್ಗಿಯೊಸ್ ಚೊಚ್ಚಲ ಟ್ರೋಫಿಯ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ಕಿರ್ಗಿಯೊಸ್‌ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಜತೆಯಲ್ಲಿ ವಿವಾದಗಳಿಂದಲೂ ಸುದ್ದಿಯಾಗಿದ್ದು, ‘ಶೋಮ್ಯಾನ್‌’ ಎಂಬ ಹೆಸರು ಪಡೆದುಕೊಂಡಿದ್ದಾರೆ. ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿ ಎರಡು ಸಲ ದಂಡವನ್ನೂ ತೆತ್ತಿದ್ದಾರೆ. ಇಲ್ಲಿ ಕಿರೀಟ ಮುಡಿಗೇರಿಸಿಕೊಂಡು ಟೀಕಾಕಾರರ ಬಾಯಿ ಮುಚ್ಚಿಸುವ ಲೆಕ್ಕಾಚಾರ ಅವರದ್ದು. ವಿಂಬಲ್ಡನ್‌ ಟೆನಿಸ್‌:‘ರಾಣಿ’ಯಾಗಿ ಮೆರೆದಕಜಕಸ್ತಾನದ ಎಲೆನಾ ರಿಬಾಕಿನಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.