'ಕಿಂಗ್ ರೋಜರ್' - ಫೆಡರರ್‌ ಪ್ರಶಂಸಿಸಿದ ಕಿಂಗ್ ಕೊಹ್ಲಿ ಬೆಂಗಳೂರು: ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿರುವ ಸ್ವಿಜರ್ಲೆಂಡ್‌ನ ದಿಗ್ಗಜ ಆಟಗಾರ ರೋಜರ್ ಫೆಡರರ್ ಅವರನ್ನು ಭಾರತ ಕ್ರಿಕೆಟ್ ತಂಡದಮಾಜಿ ನಾಯಕ ವಿರಾಟ್ ಕೊಹ್ಲಿ, 'ಕಿಂಗ್ ರೋಜರ್' ಎಂದು ಹಾಡಿ ಹೊಗಳಿದ್ದಾರೆ. ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ತಮ್ಮ ಕ್ರೀಡಾ ಜೀವನದ ಅಂತಿಮ ಟೂರ್ನಿಯಾಗಿರಲಿದೆ ಎಂದು ಫೆಡರರ್ ಗುರುವಾರ ಘೋಷಿಸಿದ್ದರು. ಇದನ್ನೂ ಓದಿ: :ಈ ದಿನ ಬರಬಾರದಿತ್ತು- ನಡಾಲ್, ಫೆಡರರ್ ಆಟಕ್ಕೆ ಮನಸೋತ ಸಚಿನ್ ಅಲ್ಲದೆ 24 ವರ್ಷಗಳ ಟೆನಿಸ್ ಪಯಣದ ಕುರಿತು ಸಾಮಾಜಿಕಮಾಧ್ಯಮದಲ್ಲಿ ದೀರ್ಘ ಬರಹ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, 'ಸಾರ್ವಕಾಲಿಕ ಶ್ರೇಷ್ಠ, ಕಿಂಗ್ ರೋಜರ್' ಎಂದು ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಫೆಡರರ್ ಅವರನ್ನು ಹೊಗಳಿದ್ದು, 'ಜೀನಿಯಸ್' (ಅಸಾಧಾರಣ ಪ್ರತಿಭೆ) ಎಂದು ಸಂಬೋಧಿಸಿದ್ದಾರೆ. ಜೊತೆಗೆ ಹೃದಯ ಒಡೆಯುವ ಎಮೋಜಿ ಹಾಕುವ ಮೂಲಕ ಫೆಡರರ್ ನಿವೃತ್ತಿಗೆ ಬೇಸರವನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ:ಐ ಲವ್‌ ಯೂ ಟೆನಿಸ್‌: ನಿವೃತ್ತಿ ಘೋಷಿಸಿದ ಟೆನಿಸ್‌ ಲೋಕದ ದಂತಕತೆ ‌ರೋಜರ್ ಫೆಡರರ್ (@) (@) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.