ಭಾರತ ಕಿರಿಯರ ತಂಡ ಪರಾಭವ ಸೇಂಟ್‌ ಪೀಟರ್ಸ್‌ಬರ್ಗ್‌ (ಪಿಟಿಐ): ಇಲ್ಲಿ ನಡೆಯುತ್ತಿರುವ ಗ್ರ್ಯಾಂಟ್‌ಕಿನ್‌ ಸ್ಮಾರಕ ಫುಟ್‌ಬಾಲ್‌ ಟೂರ್ನಿಯಲ್ಲಿಗುರುವಾರ ಭಾರತದ 19 ವಯಸ್ಸಿನೊಳಗಿನವರ ತಂಡ ಮೊಲ್ಡೊವಾ ತಂಡಕ್ಕೆ 1–2 ಗೋಲುಗಳಿಂದ ಸೋತಿದೆ. ಪಂದ್ಯದ 34ನೇ ನಿಮಿಷದಲ್ಲಿ ಭಾರತ ತಂಡದ ರೋಹಿತ್‌ ದನು ಗೋಲು ಗಳಿಸಿ ಮುನ್ನಡೆ ತಂದರು. ಎದುರಾಳಿ ತಂಡದ ಪರ ಪುಸ್ಕಾಸ್‌ ಡ್ಯಾನ್‌ (54ನೇ ನಿಮಿಷ) ಹಾಗೂ ಮಿಹೈಲ್‌ ಸಿಯೊಬನ್‌ (57ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.