ಗರ್ಭಿಣಿಯಾದ ಖ್ಯಾತ ಟೆನಿಸ್ ತಾರೆ ನವೊಮಿ ಒಸಾಕಾ ಮಿಯಾಮಿ: ಖ್ಯಾತ ಟೆನಿಸ್ ತಾರೆ ನವೊಮಿ ಒಸಾಕಾ ಗರ್ಭಿಣಿಯಾಗಿದ್ದಾರೆ. ಸ್ವತಃ ಈ ವಿಷಯವನ್ನು ನವೊಮಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ನಂಬರ್ 1 ಟೆನಿಸ್ ಆಟಗಾರ್ತಿ ಹಾಗೂ 4 ಬಾರಿ ಗ್ರ್ಯಾಂಡ್ ಸ್ಲಾಮ್ (ಸಿಂಗಲ್ಸ್) ಪ್ರಶಸ್ತಿ ಮುಡಿಗೇರಿಸಿಕೊಂಡಿರುವ 25 ವರ್ಷದ ನವೊಮಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ‘ಭವಿಷ್ಯದಲ್ಲಿ ನಾನು ತುಂಬಾ ಆಶಾವಾದಿಯಾಗಿದ್ದೇನೆ. ನಾನು ಆಡುವ ಆಟವನ್ನು ನೋಡಿ ನನ್ನ ಮಗು ಓಹ್! ಅದು ನನ್ನ ಅಮ್ಮಾ ಎಂದು ಇತರರಿಗೆ ಸಂತೋಷವಾಗಿ ಹೇಳುತ್ತದೆ’ ಎನ್ನುವ ಮೂಲಕ ಗರ್ಭಿಣಿಯಾಗಿರುವ ಸಂಗತಿಯನ್ನು ಘೋಷಿಸಿದ್ದಾರೆ. ‘2023 ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. 2024ರಲ್ಲಿ ಆಸ್ಟ್ರೇಲಿಯನ್ ಓಪನ್‌ನೊಂದಿಗೆ ಕಣಕ್ಕೆ ಮರಳಲಿದ್ದೇನೆ. ನಿಮ್ಮೆಲ್ಲರನ್ನೂ ಅನಂತವಾಗಿ ಪ್ರೀತಿಸುತ್ತೇನೆ’ ಎಂದು ಜಪಾನ್‌ ಮೂಲದ ಟೆನಿಸ್ ತಾರೆ ನವೊಮಿ ಹೇಳಿದ್ದಾರೆ. ’ ’ 2023. ../GYXRnutU3I ಕಳೆದ ಸೆಪ್ಟೆಂಬರ್‌ನಿಂದ ಯಾವುದೇ ಟೂರ್ನಿಗಳಲ್ಲಿ ನವೊಮಿ ಪಾಲ್ಗೊಂಡಿರಲಿಲ್ಲ. ಅಲ್ಲದೇ ಈ ವರ್ಷದ ಆಸ್ಟ್ರೇಲಿಯನ್ ಓಪನ್‌ಗೂ ಗೈರಾಗುತ್ತಿರುವುದಾಗಿ ತಿಳಿಸಿದ್ದರು. ನವೊಮಿ ಹೀಗೆಕೆ ಮಾಡಿದರು? ಎಂದು ಅಭಿಮಾನಿಗಳಲ್ಲಿ ಗೊಂದಲವಾಗಿತ್ತು. ಇದೀಗ ಗೊಂದಲಕ್ಕೆ ತೆರೆ ಬಿದ್ದಿದೆ. ನವೊಮಿ ಇನ್ನೂ ಮದುವೆಯಾಗಿಲ್ಲ. ಜಪಾನ್ ಮೂಲದ ಅಮೆರಿಕ ಗಾಯಕ ಕೊರಾಡಿ ಅವರ ಜೊತೆ ನವೊಮಿ ಅವರು 2019ರಿಂದ ಸಹಬಾಳ್ವೆಯಲ್ಲಿದ್ದಾರೆ. ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಹೈಕೋರ್ಟ್ ತಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.