ಚೆಟ್ರಿ ಪಡೆಗೆ ಎಫ್‌ಸಿ ಗೋವಾ ಸವಾಲು ಬೆಂಗಳೂರು: ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಎಫ್‌ಸಿ ಗೋವಾ ಸವಾಲು ಎದುರಿಸಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿಗೆ (ಬಿಎಫ್‌ಸಿ) ಲೀಗ್‌ ಹಂತದ ಕೊನೆಯ ಪಂದ್ಯವಾಗಿದೆ. ಈಗಾಗಲೇ ಪ್ಲೇ ಆಫ್‌ ಹಂತ ತಲುಪಿರುವ ತಂಡವು ಈ ಸೆಣಸಾಟದಲ್ಲಿ ನಿರಾಳವಾಗಿ ಆಡಲಿದೆ. ಲೀಗ್‌ ಹಂತದ ಸ್ಥಾನವನ್ನು ನಿರ್ಧರಿಸುವುದರಿಂದ ಈ ಪಂದ್ಯವು ಬಿಎಫ್‌ಸಿಗೆ ಮಹತ್ವದ್ದೆನಿಸಿದೆ. ಸತತ ಏಳು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಬೆಂಗಳೂರು ಹೆಚ್ಚಿನ ವಿಶ್ವಾಸದಲ್ಲಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಗೋವಾ ತಂಡವು ಇಲ್ಲಿ ಪುಟಿದೇಳುವ ಕಾತರದಲ್ಲಿದೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.