ಖೇಲೊ ಇಂಡಿಯಾ ಯೂತ್ ಗೇಮ್ಸ್‌ ಫುಟ್‌ಬಾಲ್‌ ಟೂರ್ನಿ: ಕರ್ನಾಟಕಕ್ಕೆ ಬೆಳ್ಳಿ ಬೆಂಗಳೂರು: ಕರ್ನಾಟಕ ತಂಡದವರು ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ನಿರಾಸೆ ಅನುಭವಿಸಿ, ಬೆಳ್ಳಿ ಪದಕ ಪಡೆದುಕೊಂಡರು. ಶುಕ್ರವಾರ ನಡೆದ ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು 2–0 ಗೋಲುಗಳಿಂದ ಮಣಿಸಿದ ಕೇರಳ, ಚಿನ್ನ ಗೆದ್ದುಕೊಂಡಿತು. ಪ್ರಬಲ ಪೈಪೋಟಿ ನಡೆದ ಪಂದ್ಯದ 31ನೇ ನಿಮಿಷದಲ್ಲಿ ಸಿ.ಪಿ.ಶ್ರೀರಾಜ್‌ ಅವರು ಕೇರಳ ತಂಡಕ್ಕೆ ಮೊದಲ ಗೋಲು ತಂದಿತ್ತರು. ಕೆ.ಕಿರಣ್‌ 43ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದರು. ಕರ್ನಾಟಕ ತಂಡ ಮರುಹೋರಾಟ ನಡೆಸಲು ಪ್ರಯತ್ನಿಸಿತಾದರೂ, ಕೇರಳದ ಡಿಫೆಂಡರ್‌ಗಳು ಅವಕಾಶ ನೀಡಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.