ಇಟಲಿಯ ಫುಟ್‌ಬಾಲ್ ದಿಗ್ಗಜ ಪಾಲೊ ರೊಸಿ ನಿಧನ ರೋಮ್: ಇಟಲಿ ಫುಟ್‌ಬಾಲ್ ತಂಡದ ಮಾಜಿ ನಾಯಕ ಮತ್ತು ವೀಕ್ಷಕ ವಿವರಣೆಕಾರ ಪಾಲೊ ರೊಸಿ (64) ಗುರುವಾರ ನಿಧನರಾದರು. 1982ರಲ್ಲಿ ವಿಶ್ವಕಪ್ ಗೆದ್ದ ಇಟಲಿ ತಂಡಕ್ಕೆ ಅವರು ನಾಯಕರಾಗಿದ್ದರು. ’ಗುರುವಾರ ಬೆಳಗಿನ ಜಾವ ನಿದ್ರೆಯಲ್ಲಿಯೇ ರೊಸಿ ಕೊನೆಯುಸಿರೆಳೆದಿದ್ದಾರೆ‘ ಎಂದು ಅವರ ಪತ್ನಿ ಫೆಡೆರಿಕಾ ಕೆಪೆಲೆಟ್ಟಿ ತಿಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಸಂದೇಶ ಹಾಕಿರುವ ಫೆಡೆರಿಕಾ, ’ನಿಮ್ಮಂತೆ ಮತ್ತೊಬ್ಬರಿಲ್ಲ. ನೀವು ವಿಶೇಷ, ವಿಶಿಷ್ಟ ಮತ್ತು ಪರಿಪೂರ್ಣ ವ್ಯಕ್ತಿ‘ ಎಂದು ತಮ್ಮ ಪತಿಯ ಕುರಿತು ಬರೆದಿದ್ದಾರೆ. 1982ರ ವಿಶ್ವಕಪ್‌ನಲ್ಲಿ ರೊಸಿ ಆರು ಗೋಲುಗಳನ್ನು ಗಳಿಸಿದ್ದರು. ಅದರಲ್ಲಿ ಬ್ರೆಜಿಲ್ ವಿರುದ್ಧದ ಜಯಕ್ಕೆ ಕಾರಣವಾಗಿದ್ದ ಹ್ಯಾಟ್ರಿಕ್ ಕೂಡ ಸೇರಿದೆ. ಫಿಫಾ ವರ್ಷದ ಆಟಗಾರ ಗೌರವಕ್ಕೂ ಅವರು ಪಾತ್ರರಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.