ಐಎಸ್‌ಎಲ್: ಮುಂಬೈಗೆ ಜಯ ಬ್ಯಾಂಬೊಲಿಮ್‌: ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ತಂಡವು ಬುಧವಾರ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಂದು ಜಯದ ಸಿಹಿ ಸವಿಯಿತು. ಜಿಎಂಸಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ತಂಡವು 2–1 ಗೋಲುಗಳಿಂದ ಚೆನ್ನೈಯಿನ್ ಎಫ್ ಸಿ ವಿರುದ್ಧ ಗೆದ್ದಿತು. ಮುಂಬೈಗೆ ಇದು ನಾಲ್ಕನೇ ಜಯವಾಗಿದೆ. ಚೆನ್ನೈ ಪರ 40ನೇ ನಿಮಿಷದಲ್ಲಿ ಜೇಕಬ್ ಸಿಲ್ವೆಸ್ಟ್ರಾ ಗೋಲು ದಾಖಲಿಸಿದರು. ಮುಂಬೈ ತಂಡದ ಹರ್ಮನ್ ಸಂತಾನಾ (45+4ನಿ) ಕಾಲ್ಚಳಕ ತೋರಿದರು. 75ನೇ ನಿಮಿಷದಲ್ಲಿ ಆ್ಯಡಂ ಫಾಂಡ್ರೆ ಮುಂಬೈಗೆ ಮತ್ತೊಂದು ಗೋಲು ತಂದರು. ವಾಸ್ಕೋದಲ್ಲಿ ಗುರುವಾರ ಈಸ್ಟ್ ಬೆಂಗಾಲ್– ಜಮ್ಶೆಡ್‌ಪುರ ಎಫ್‌ಸಿ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.