ಕತಾರ್‌ ಕ್ರೀಡಾಂಗಣಗಳಲ್ಲಿ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸಿದ್ದು 34 ಲಕ್ಷ ಜನ ದೋಹಾ:ಕತಾರ್‌ನಲ್ಲಿ ನಡೆದ ಈ ಬಾರಿಯ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯನ್ನು ಕ್ರೀಡಾಂಗಣಗಳಲ್ಲಿ 34 ಲಕ್ಷಕ್ಕಿಂತ ಹೆಚ್ಚು ಜನ ವೀಕ್ಷಿಸಿದ್ದಾರೆ. ಅತಿ ಹೆಚ್ಚು ಜನ ವೀಕ್ಷಿಸಿದ ಆವೃತ್ತಿಗಳಲ್ಲಿ ಇದೂ ಒಂದೆನಿಸಿಕೊಂಡಿದೆ. ‘ಲುಸೈಲ್‌ನಲ್ಲಿ ನಡೆದ ಫೈನಲ್ ಪಂದ್ಯಕ್ಕೆ 88,966 ಜನ ಸಾಕ್ಷಿಯಾಗಿದ್ದರು. ಒಟ್ಟು 34 ಲಕ್ಷ ಜನ ಟೂರ್ನಿಯನ್ನು ವೀಕ್ಷಿಸಿದ್ದು, ಕ್ರೀಡಾಂಗಣಗಳ ಆಸನ ಸಾಮರ್ಥ್ಯದ ಶೇಕಡ 96.3 ಆಗಿದೆ’ ಎಂದು ಫಿಫಾ ತಿಳಿಸಿದೆ. 1994ರಲ್ಲಿ ಅಮೆರಿಕದಲ್ಲಿ ನಡೆದ ಟೂರ್ನಿಗೆ 35 ಲಕ್ಷಕ್ಕಿಂತ ಅಧಿಕ ಮಂದಿ ಸಾಕ್ಷಿಯಾಗಿದ್ದು, ಇದುವರೆಗಿನ ದಾಖಲೆಯಾಗಿದೆ. 2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಆವೃತ್ತಿಯಲ್ಲೂ 34 ಲಕ್ಷಕ್ಕಿಂತ ಹೆಚ್ಚು ಜನ ಸೇರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.