ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಗೋವಾ–ಬೆಂಗಾಲ್ ಪಂದ್ಯ ಡ್ರಾ ಮಡಗಾಂವ್: ಉತ್ತಮ ಆಟವಾಡಿದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವು ಐಎಸ್‌ಎಲ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಆತಿಥೇಯ ಎಫ್‌ಸಿ ಗೋವಾ ಎದುರು 1–1ರ ಡ್ರಾ ಸಾಧಿಸಿದೆ. ಇಲ್ಲಿನ ಫಟೋರ್ಡ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿ 1–1ರಿಂದ ಅಂತ್ಯಗೊಂಡಿತು. ಗೋವಾ ಪರ ಇಗೊರ್ ಅಂಗುಲೊ 39ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಈಸ್ಟ್ ಬೆಂಗಾಲ್‌ ತಂಡದ ಡೇನಿಯಲ್ ಫಾಕ್ಸ್ 65ನೇ ನಿಮಿಷದಲ್ಲಿ ಸಮಬಲದ ಗೋಲು ಹೊಡೆದರು. ಪಂದ್ಯದ ಮೊದಲ ನಿಮಿಷದಲ್ಲೇ ಬೆಂಗಾಲ್ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಆದರೆ ಅಂಥೋನಿ ಪಿಲ್ಕಿಂಗ್ಟನ್ ಒದ್ದ ಚೆಂಡು ಗುರಿ ಸೇರಲಿಲ್ಲ. 37ನೇ ನಿಮಿಷದಲ್ಲಿ ಗೋವಾದ ಗೋಲು ಗಳಿಕೆಯ ಪ್ರಯತ್ನವನ್ನು ಬೆಂಗಾಲ್ ಗೋಲ್‌ಕೀಪರ್‌ ದೇವಜೀತ್ ಮಜುಂದಾರ್ ಯಶಸ್ವಿಯಾಗಿ ತಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.