ಮಾಜಿ ಫುಟ್‌ಬಾಲ್ ಆಟಗಾರ್ತಿ ಕವಿತಾ ನಿಧನ ಬೆಂಗಳೂರು: ಕರ್ನಾಟಕ ಫುಟ್‌ಬಾಲ್ ತಂಡದ ಮಾಜಿ ಆಟಗಾರ್ತಿ ಕವಿತಾ ಎಸ್‌. (43) ಅವರು ಕಿಡ್ನಿ ವೈಫಲ್ಯದಿಂದ ಶುಕ್ರವಾರ ನಿಧನ ಹೊಂದಿದರು. ಅವರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ. 1995ರಲ್ಲಿ ಮಣಿಪುರ, 1996ರಲ್ಲಿ ಶಿಲ್ಲಾಂಗ್ ಹಾಗೂ 1997ರಲ್ಲಿ ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ರಾಜ್ಯ ತಂಡದ ಪರ ಆಡಿದ್ದರು. ಕವಿತಾ ಅವರ ಅಂತ್ಯಕ್ರಿಯೆ ಶನಿವಾರ ನೆರವೇರಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.