ನಿಖಿಲ್ ರಾಜ್ ಹ್ಯಾಟ್ರಿಕ್‌: ಕಿಕ್‌ಸ್ಟಾರ್ಟ್‌ ಜಯಭೇರಿ ಬೆಂಗಳೂರು: ಎಂ. ನಿಖಿಲ್ ರಾಜ್ ಅವರು ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ತಂಡಕ್ಕೆ 7–0 ಗೋಲುಗಳ ಜಯ ಒಲಿಯಿತು. ನಿಖಿಲ್‌ 3, 61 ಹಾಗೂ 74ನೇ ನಿಮಿಷಗಳಲ್ಲಿ ತಂಡಕ್ಕೆ ಗೋಲು ತಂದುಕೊಟ್ಟರು. ವಿಘ್ನೇಶ್‌ (31ನೇ ನಿಮಿಷ), ಯುಜೊಚಿ ಇಮ್ಯಾನೆಲ್‌ ಎಚೆಬಿರಿ (45 ಹಾಗೂ 54ನೇ ನಿಮಿಷ) ಹಾಗೂ ಕಾರ್ತಿಕ್‌ (71ನೇ ನಿಮಿಷ) ವಿಜೇತ ಕಿಕ್‌ಸ್ಟಾರ್ಟ್‌ ತಂಡದ ಪರ ಕಾಲ್ಚಳಕ ತೋರಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಡ್ರೀಮ್‌ ಯುನೈಟೆಡ್ ಎಫ್‌ಸಿ 1–0ಯಿಂದ ಎಎಸ್‌ಸಿ ಸೆಂಟರ್‌ ಎಫ್‌ಸಿ ವಿರುದ್ಧ ಜಯ ಸಾಧಿಸಿತು. ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌–ಬೆಂಗಳೂರು ಈಗಲ್ಸ್ ಎಫ್‌ಸಿ ಹಾಗೂ ಬಿಎಫ್‌ಸಿ–ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.