ಮೊರೊಕ್ಕೊ ತಂಡಕ್ಕೆ ಅದ್ದೂರಿ ಸ್ವಾಗತ ರಬಾತ್‌, ಮೊರೊಕ್ಕೊ: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಮೊರೊಕ್ಕೊ ಫುಟ್‌ಬಾಲ್‌ ತಂಡಕ್ಕೂ ತವರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಕತಾರ್‌ನಲ್ಲಿ ನಡೆದ ಟೂರ್ನಿಯಲ್ಲಿ ಮೊರೊಕ್ಕೊ ತಂಡವು ನಾಲ್ಕನೇ ಸ್ಥಾನ ಗಳಿಸಿತ್ತು. ಸೂಟ್‌, ಟೈ ಧರಿಸಿ ಮಿಂಚುತ್ತಿದ್ದ ಆಟಗಾರರು ಮಂಗಳವಾರ ರಾಜಧಾನಿ ರಬಾತ್‌ನಲ್ಲಿ ತೆರೆದ ಬಸ್ಸಿನಲ್ಲಿ ಮೆರವಣಿಗೆ ಸಾಗಿದರು. ರಸ್ತೆಯುದ್ದಕ್ಕೂ ಸಾವಿರಾರು ಜನರು ನೃತ್ಯ, ಹಾಡಿನ ಮೂಲಕ ಸಂಭ್ರಮಿಸಿದರು. ಆಟಗಾರರು ಬಳಿಕ ದೊರೆ ಆರನೇ ಮೊಹಮ್ಮದರ ರಾಯಲ್ ಪ್ಯಾಲೇಸ್‌ಗೆ ತೆರಳಿದರು. ಅಲ್ಲಿ ಅವರನ್ನು ಅಭಿನಂದಿಸಲಾಯಿತು. ಅಟ್ಲಾಸ್‌ ಲಯನ್ಸ್ ಎಂದು ಕರೆಯಲಾಗುವ ಮೊರೊಕ್ಕೊ ತಂಡವು ವಿಶ್ವಕಪ್‌ ಟೂರ್ನಿಯಲ್ಲಿ ಪ್ರಮುಖ ತಂಡಗಳಾದ ಬೆಲ್ಜಿಯಂ, ಸ್ಪೇನ್‌ ಮತ್ತು ಪೋರ್ಚುಗಲ್‌ಗೆ ಸೋಲಿನ ರುಚಿ ತೋರಿಸಿತ್ತು. ಟೂರ್ನಿಯ ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕಾ–ಅರಬ್ ದೇಶ ಎಂಬ ಶ್ರೇಯ ಗಳಿಸಿತ್ತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೊರೊಕ್ಕೊ 1–2ರಿಂದ ಕ್ರೊವೇಷ್ಯಾ ಎದುರು ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.