ಕಾವ್ಯಾ ನಾಲ್ಕು ಗೋಲು: ಕಿಕ್‌ಸ್ಟಾರ್ಟ್‌ಗೆ ಭರ್ಜರಿ ಜಯ ಬೆಂಗಳೂರು: ಕಾವ್ಯಾ ಪಿ. ಅವರು ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಕಿಕ್‌ಸ್ಟಾರ್ಟ್ ಎಫ್‌ಸಿ ತಂಡವು ಭರ್ಜರಿ ಜಯ ಗಳಿಸಿತು. ಕೆಎಸ್‌ಎಫ್ಎ ಕರ್ನಾಟಕ ಮಹಿಳಾ ಲೀಗ್ ಸೂಪರ್ ಡಿವಿಷನ್ ಫುಟ್‌ಬಾಲ್‌ ಪಂದ್ಯದಲ್ಲಿ ಭಾನುವಾರ 9–0ಯಿಂದ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡವನ್ನು ಪರಾಭವಗೊಳಿಸಿತು. ಪಂದ್ಯದ ಆರಂಭದಿಂದಲೇ ಕಿಕ್‌ಸ್ಟಾರ್ಟ್‌ ಅಧಿಪತ್ಯ ಸಾಧಿಸಿತ್ತು. ನವೊಬಿ ಚನುಲಾಯಿಶ್ರಾಮ್‌ 4ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು. 48ನೇ ನಿಮಿಷದಲ್ಲಿ ಅವರು ಮತ್ತೊಮ್ಮೆ ಯಶಸ್ಸು ಸಾಧಿಸಿದರು. ಕಾವ್ಯಾ 21, 22, 54 ಹಾಗೂ 65ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಮಾರ್ಗರೇಟ್ ದೇವಿ (14ನೇ ನಿಮಿಷ), ಎಂ.ನಂದಿನಿ (53ನೇ ನಿಮಿಷ) ಹಾಗೂ ಸುಶ್ಮಿತಾ ಲೆಪೆಹಾ (74ನೇ ನಿಮಿಷ) ತಲಾ ಒಂದು ಗೋಲು ಹೊಡೆದು ತಂಡದ ಜಯಕ್ಕೆ ಕೊಡುಗೆ ನೀಡಿದರು. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಎಫ್‌ಸಿ– ಮಿಸಾಕ ಯುನೈಟೆಡ್ ಎಫ್‌ಸಿ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.