ಶೋಭನಾ ಹ್ಯಾಟ್ರಿಕ್ ಗೋಲು: ಪರಿಕ್ರಮ ಎಫ್‌ಸಿ ಜಯಭೇರಿ ಬೆಂಗಳೂರು: ಶೋಭನಾ ಸೆಲ್ವಂ ಅವರು ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪರಿಕ್ರಮ ಎಫ್‌ಸಿ ತಂಡವು ಗೆದ್ದಿತು. ಇಲ್ಲಿ ನಡೆಯುತ್ತಿರುವ ಕೆಎಸ್‌ಎಫ್‌ಎ ಮಹಿಳಾ ಲೀಗ್ ಸೂಪರ್ ಡಿವಿಷನ್ ಪಂದ್ಯದಲ್ಲಿ ಮಂಗಳವಾರ 3–0ಯಿಂದ ರೆಬೆಲ್ಸ್ ವಿಮೆನ್ಸ್ ತಂಡವನ್ನು ಪರಾಭವಗೊಳಿಸಿತು. ಶೋಭನಾ ಅವರು 12, 62 ಹಾಗೂ 90ನೇ ನಿಮಿಷದಲ್ಲಿ ತಂಡದ ಪರ ಗೋಲು ದಾಖಲಿಸಿದರು. ಬುಧವಾರ ನಡೆಯುವ ಪಂದ್ಯಗಳಲ್ಲಿ ಬೆಂಗಳೂರು ಬ್ರೇವ್ಸ್–ಸ್ಲೇಜರ್ಸ್‌ ಬೆಳಗಾವಿ, ಬೆಂಗಳೂರು ಸಾಕರ್ ಗೆಲಾಕ್ಸಿ–ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡಗಳು ಮುಖಾಮಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.