ಪ್ಲೇ ಆಫ್‌ ಮೇಲೆ ಎಫ್‌ಸಿ ಗೋವಾ ಕಣ್ಣು ಮಡಗಾಂವ್‌: ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವ ತನ್ನ ಅವಕಾಶಗಳನ್ನು ಇನಷ್ಟು ವೃದ್ಧಿಸಿಕೊಳ್ಳುವ ಹಂಬಲದಲ್ಲಿರುವ ಎಫ್‌ಸಿ ಗೋವಾ ತಂಡವು ಬುಧವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ ಈ ಪಂದ್ಯವು ಫಟೋರ್ಡ ಕ್ರೀಡಾಂಗಣದಲ್ಲಿ ನಡೆಯಲಿದೆ. ಆತಿಥೇಯ ಗೋವಾ ಎಫ್‌ಸಿಯನ್ನು ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ಸಂಭಾವ್ಯ ತಂಡವೆಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಆರು ಪಂದ್ಯಗಳಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿರುವ ಆ ತಂಡದ ವಿಶ್ವಾಸ ಸ್ವಲ್ಪ ಕುಸಿದಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಗೋವಾ (24 ಪಾಯಿಂಟ್ಸ್) ಸದ್ಯ ಐದನೇ ಸ್ಥಾನದಲ್ಲಿದೆ. ಒಡಿಶಾ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಕಳೆದ ಎಂಟು ಪಂದ್ಯಗಳಲ್ಲಿ ಆ ತಂಡಕ್ಕೆ ಜಯ ಒಲಿದಿಲ್ಲ. ಟೂರ್ನಿಯಲ್ಲಿಯೇ ಗರಿಷ್ಠ 10 ಪಂದ್ಯಗಳಲ್ಲಿ ಅದು ಕೈಚೆಲ್ಲಿದೆ. ಆದರೂ ತಂಡದ ಹಂಗಾಮಿ ಕೋಚ್‌ ಗೆರಾಲ್ಡ್ ಪೇಟನ್ ಅವರು ಗೋವಾ ಎದುರಿನ ಹಣಾಹಣಿಯಲ್ಲಿ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯ ಆರಂಭ: ಸಂಜೆ 7.30 ಸ್ಥಳ: ಫಟೋರ್ಡ ಕ್ರೀಡಾಂಗಣ, ಮಡಗಾಂವ್‌. ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.