ಫುಟ್‌ಬಾಲ್‌: ಸ್ಲಾಮ್‌ಜರ್ಸ್‌ ಬೆಳಗಾವಿಗೆ ಜಯ ಬೆಂಗಳೂರು: ಸ್ಲ್ಯಾಮ್‌ಜರ್ಸ್‌ ಬೆಳಗಾವಿ ತಂಡವು ರಾಜ್ಯ ಫುಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಇಂಟಿಮಸಿ ಕರ್ನಾಟಕ ವಿಮೆನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು. ಬುಧವಾರ ಇಲ್ಲಿ ನಡೆದ ಸೂಪರ್ ಡಿವಿಷನ್‌ ಪಂದ್ಯದಲ್ಲಿ 1–0ಯಿಂದ ಮಿಸಾಕ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು. ವಿಜೇತ ತಂಡದ ಆರತಿ (45ನೇ ನಿಮಿಷ) ಗೋಲು ದಾಖಲಿಸಿದರು. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮಾತೃ ಪ್ರತಿಷ್ಠಾನ ಎಫ್‌ಸಿ–ಬೆಂಗಳೂರು ಸಾಕರ್ ಗೆಲಾಕ್ಸಿ ತಂಡಗಳು ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.