ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿ: ಮೆಸ್ಸಿ–ನೇಮರ್ ಮುಖಾಮುಖಿ ಬ್ರೆಜಿಲಿಯಾ, ಬ್ರೆಜಿಲ್‌: ವಿಶ್ವದ ಪ್ರಮುಖ ಆಟಗಾರರಾದ ಲಯೊನೆಲ್ ಮೆಸ್ಸಿ ಹಾಗೂ ನೇಮರ್‌ ಅವರ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಅರ್ಜೆಂಟೀನಾ ಹಾಗೂ ಬ್ರೆಜಿಲ್ ತಂಡಗಳು ಫೈನಲ್ ತಲುಪಿದ್ದು, ರಿಯೊ ಡಿ ಜನೈರೊದ ಐತಿಹಾಸಿಕ ಮರಕಾನ ಕ್ರೀಡಾಂಗಣದಲ್ಲಿಶನಿವಾರ ಪ್ರಶಸ್ತಿಗಾಗಿ ಸೆಣಸಲಿವೆ. ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು 3–2ರಿಂದ ಕೊಲಂಬಿಯಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1–1 ಸಮಬಲ ಸಾಧಿಸಿದ್ದರಿಂದ ಶೂಟೌಟ್‌ ಮೊರೆ ಹೋಗಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.