ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಕಿರೀಟ ರಿಯಾದ್‌, ಸೌದಿ ಅರೇಬಿಯಾ: ಕರ್ನಾಟಕ ತಂಡ 54 ವರ್ಷಗಳ ಬಳಿಕ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ರಿಯಾದ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಕರ್ನಾಟಕ 3–2 ಗೋಲುಗಳಿಂದ ಮೇಘಾಲಯ ತಂಡವನ್ನು ಮಣಿಸಿತು. ಸಂತೋಷ್‌ ಟ್ರೋಫಿಯಲ್ಲಿ ಕರ್ನಾಟಕ ಒಟ್ಟಾರೆಯಾಗಿ ಜಯಿಸಿದ ಐದನೇ ಹಾಗೂ 1968–69ರ ಬಳಿಕ ಗೆದ್ದ ಮೊದಲ ಪ್ರಶಸ್ತಿ ಇದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.