ಎಲೆಕ್ಟ್ರಿಕ್ ಕಾರು ಸಂಸ್ಥೆ ಲುನಾಜ್‌ನಲ್ಲಿ ಷೇರು ಖರೀದಿಸಿದ ಡೇವಿಡ್ ಬೆಕಮ್ ಲಂಡನ್: ಫುಟ್ಬಾಲ್ ತಾರೆ ಡೇವಿಡ್ ಬೆಕಮ್ ಅವರು ಬ್ರಿಟನ್ ತಳಹದಿಯ ವಿದ್ಯುತ್ ಚಾಲಿತ ಕಾರು ತಯಾರಿಕಾಸಂಸ್ಥೆ ಲುನಾಜ್‌ನಲ್ಲಿ ಶೇಕಡಾ 10ರಷ್ಟು ಷೇರನ್ನು ಖರೀದಿಸಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಡೇವಿಡ್ ಬೆಕಮ್, ಸ್ಟಾರ್ಟ್‌ಅಪ್‌‌ಗಳಲ್ಲಿ ಹೂಡಿಕೆಯ ಬಂಡವಾಳವನ್ನು ವಿಸ್ತರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ರಿಯಲ್ ಮ್ಯಾಡ್ರಿಡ್‌ ಕ್ಲಬ್‌ನಲ್ಲಿ ನಂಬಿಕೆ ಕೊರತೆ: ಕೋಚ್‌ ಹುದ್ದೆ ತೊರೆದ ಜಿದಾನೆ ಒಪ್ಪಂದದ ಮೌಲ್ಯವನ್ನು ಬಹಿರಂಗಪಡಿಸಲಾಗಿಲ್ಲ. ಈ ಕುರಿತು ಲುನಾಜ್ ಸಂಸ್ಥೆ ತಕ್ಷಣಕ್ಕೆ ಪ್ರತಿಕ್ರಿಯಿಸಲಿಲ್ಲ. ಬೆಕಮ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬೆಕಮ್ ಅವರು ಡಿಬಿ ವೆಂಚರ್ಸ್ ಕಂಪನಿಯ ಮೂಲಕ ಲುನಾಜ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.