‘ಲಿವರ್‌ಪೂಲ್‌– ಮ್ಯಾಡ್ರಿಡ್‌ ಜಿದ್ದಾಜಿದ್ದಿ ಸಾಧ್ಯತೆ’ ಬೆಂಗಳೂರು: ರಿಯಲ್ ಮ್ಯಾಡ್ರಿಡ್‌ ಮತ್ತು ಲಿವರ್‌ಪೂಲ್ ತಂಡಗಳ ನಡುವಣ ಯೂರೋಪಿಯನ್‌ ಚಾಂಪಿಯನ್ಸ್‌ ಲೀಗ್‌ (ಯುಸಿಎಲ್‌) 16ರ ಘಟ್ಟದ ಮೊದಲ ಲೆಗ್‌ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದು ಮಾಜಿ ಫುಟ್‌ಬಾಲ್ ಆಟಗಾರ, ಇಂಗ್ಲೆಂಡ್‌ನ ಟೆರಿ ಪೆಲಾನ್‌ ಹೇಳಿದರು. ಸೋನಿ ಸ್ಪೋರ್ಟ್ಸ್ ಶುಕ್ರವಾರ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಅವರು ಮಾತನಾಡಿದರು. ವಿನಿಸಿಯಸ್‌ ಜೂನಿಯರ್, ಲೂಕಾ ಮಾಡ್ರಿಚ್‌ ಮತ್ತು ಈಡನ್ ಹಜಾರ್ಡ್‌ ಅವರು ರಿಯಲ್ ಮ್ಯಾಡ್ರಿಡ್‌ ತಂಡದ ಬಲ ಎನಿಸಿದ್ದಾರೆ. ಲಿವರ್‌ಪೂಲ್ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದು ತೀವ್ರ ಸವಾಲೊಡ್ಡಬಲ್ಲರು ಎಂದು ಬೆಂಗಳೂರು ಮೂಲದ ಸೌತ್ ಯುನೈಟೆಡ್‌ ಎಫ್‌ಸಿ ಕೋಚ್‌ ಕೂಡ ಆಗಿರುವ ಟೆರಿ ನುಡಿದರು. ಲಿವರ್‌ಪೂಲ್‌ ಮತ್ತು ರಿಯಲ್ ಮ್ಯಾಡ್ರಿಡ್‌ ತಂಡಗಳ ನಡುವಣ ಪಂದ್ಯವು ಫೆಬ್ರುವರಿ 22ರ ತಡರಾತ್ರಿ 1.30ಕ್ಕೆ ನಡೆಯಲಿದೆ. ಸೋನಿ ಸ್ಪೋರ್ಟ್‌ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರ ಪ್ರಸಾರ ಇರಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.