ಫುಟ್‌ಬಾಲ್: ಭಾಸ್ಕರ ಗಂಗೂಲಿಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು ಕೋಲ್ಕತ್ತ: ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಹಾಗೂ ಗೋಲ್‌ಕೀಪರ್ ಭಾಸ್ಕರ ಗಂಗೂಲಿ ಅವರನ್ನು ಅನಾರೋಗ್ಯದ ಕಾರಣ ಇಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. 1982ರ ಏಷ್ಯನ್ ಗೇಮ್ಸ್‌ನಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದ ಭಾಸ್ಕರ ಅವರಿಗೆ ಸೋಮವಾರ ಸಂಜೆ ತೀವ್ರ ಜ್ವರ ಬಾಧಿಸಿತ್ತು. ಅಲ್ಲದೆ ಆಮ್ಲಜನಕ ಮಟ್ಟವೂ ಕುಸಿದಿತ್ತು. ‘ಭಾಸ್ಕರ ಅವರ ಕೋವಿಡ್‌ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಸದ್ಯ ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ‘ ಎಂದು ಅವರು ತಂಡದಲ್ಲಿದ್ದಾಗ ಸಹ ಆಟಗಾರರಾಗಿದ್ದ ಮಿಹಿರ್ ಬಸು ತಿಳಿಸಿದ್ದಾರೆ. ಈಸ್ಟ್ ಬೆಂಗಾಲ್ ತಂಡದ ಮಾಜಿ ಆಟಗಾರರಾಗಿರುವ 64 ವರ್ಷದ ಭಾಸ್ಕರ ಪಾರ್ಕಿನ್ಸನ್‌ನಿಂದಲೂ ಬಳಲುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.