ಬಂಗಾಳದ ಬೀಡಿ ಪ್ಯಾಕೆಟ್‌ನಲ್ಲಿ ಮೆಸ್ಸಿ, ರೊನಾಲ್ಡೊ ಚಿತ್ರ ವೈರಲ್ ಕೋಲ್ಕತ್ತ: ಅರ್ಜೆಂಟೀನಾ ನಾಯಕ ಹಾಗೂ ಫುಟ್ಬಾಲ್ ಲೋಕದ ಜನಪ್ರಿಯ ಆಟಗಾರ ಲಯೊನೆಲ್ ಮೆಸ್ಸಿ, ಭಾರತದಲ್ಲೂ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ 'ಕೋಪಾ ಅಮೆರಿಕ' ಪ್ರಶಸ್ತಿ ಗೆದ್ದಾಗ ಭಾರತದಲ್ಲೂ ಸಂಭ್ರಮ ಮನೆ ಮಾಡಿತ್ತು. ಈ ಮಧ್ಯೆ ಮೆಸ್ಸಿ ಹೆಸರಿನಲ್ಲಿ ಬೀಡಿಯೊಂದು ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್ ಆಗಿದೆ. ಇದನ್ನೂ ಓದಿ: | | ಮೆಸ್ಸಿ ಕನಸು ನನಸು, ಕಣ್ಣೀರಿಟ್ಟ ನೇಮರ್... ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಎಂಬವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಮೆಸ್ಸಿ ಮಾಡಿರುವ ಮೊದಲ ಜಾಹೀರಾತು ಒಪ್ಪಂದ ಇದಾಗಿದೆ ಎಂದು ತಮಾಷೆಯ ಅಡಿಬರಹವನ್ನು ನೀಡಿದ್ದಾರೆ. ' ☺️☺️☺️☺️☺️ ../07vh7bTMwC ರುಪಿನ್ ಶರ್ಮಾ ಹಂಚಿರುವ ಚಿತ್ರಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಮೆಸ್ಸಿ ಬೀಡಿ'ಯನ್ನು ಪಶ್ಚಿಮ ಬಂಗಾಳದ ಧುಲಿಯಾನ್‌ನಲ್ಲಿ ಸ್ಥಿತಗೊಂಡಿರುವ ಆರಿಫ್ ಬೀಡಿ ಫ್ಯಾಕ್ಟರಿಸಿದ್ಧಪಡಿಸುತ್ತಿದೆಎಂಬುದು ತಿಳಿದು ಬಂದಿದೆ. ಮೆಸ್ಸಿ ಚಿತ್ರದೊಂದಿಗೆ ಬೀಡಿ ಮಾರಾಟ ಮಾಡಲಾಗುತ್ತಿದೆ. . ://./EVkDX8RSmI ../VIiLARn7vo ಕೇವಲ ಮೆಸ್ಸಿ ಮಾತ್ರವಲ್ಲದೆ ಫೋರ್ಚುಗಲ್‌ನ ಅತಿ ಬೇಡಿಕೆಯ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿರುವ ಬೀಡಿ ಪ್ಯಾಕೆಟ್ ವೈರಲ್ ಆಗಿದೆ. ಲಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ, ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಚಾರ ರಾಯಭಾರಿಯಾಗಿದ್ದು, ಕೋಟಿಗಟ್ಟಲೆ ರೂಪಾಯಿಯ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಹಾಗಿರಬೇಕಾದರೆ ಭಾರತದ ಬೀಡಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. . " "😜. 👍 😁 ../RaydB0r1DI ‘ ’. , ’ . ' '', #' @ @' @: #, ' #@ ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.