ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ ತಂಡಕ್ಕೆ ಗೆಲುವು ಬೆಂಗಳೂರು: ರಾಜೇಶ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಆರ್‌ಡಬ್ಲ್ಯುಎಫ್‌ ತಂಡದವರು ಬಿಡಿಎಫ್‌ಎ ಆಶ್ರಯದ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದರು. ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ 4–1 ಗೋಲುಗಳಿಂದ ಬೆಂಗಳೂರು ಗನ್ನರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ರಾಜೇಶ್‌ ಅವರು 73 ಮತ್ತು 77ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಇತರ ಗೋಲುಗಳನ್ನು ಪ್ರಕಾಶ್‌ (50) ಹಾಗೂ ದಿನೇಶ್ (67) ತಂದಿತ್ತರು. ಗನ್ನರ್ಸ್‌ ತಂಡದ ಏಕೈಕ ಗೋಲನ್ನು ಸಿರಿಲ್‌ ಜಸ್ಟಿನ್‌ 85ನೇ ನಿಮಿಷದಲ್ಲಿ ಗಳಿಸಿದರು. ಸೌತ್‌ ಯುನೈಟೆಡ್‌ ಎಫ್‌ಸಿ ತಂಡ ಸೌತ್‌ ಇಂಡಿಯಾ ಎಫ್‌ಸಿ ವಿರುದ್ಧ ವಾಕ್‌ಓವರ್‌ ಪಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.