ಐ ಲೀಗ್‌: ಡೆಲ್ಲಿ ಎಫ್‌ಸಿ ಜಯಭೇರಿ ಬೆಂಗಳೂರು: ಉತ್ತಮ ಆಟವಾಡಿದ ಡೆಲ್ಲಿ ಎಫ್‌ಸಿ ತಂಡವು ಐ–ಲೀಗ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಕೇರಳ ಯುನೈಟೆಡ್‌ ಎಫ್‌ಸಿ ಎದುರು 2–1ರಿಂದ ಜಯ ಸಾಧಿಸಿತು. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪರ ಅನ್ವರ್‌ ಅಲಿ (47ನೇ ನಿಮಿಷ) ಹಾಗೂ ಹಿಮಾಂಶು ಜಾಂಗ್ರಾ (60ನೇ ನಿಮಿಷ) ಕಾಲ್ಚಳಕ ತೋರಿದರು. ಹೃಷಿ ಧಾತ್‌ (23ನೇ ನಿಮಿಷ) ಕೇರಳ ಪರ ಒಂದು ಗೋಲು ದಾಖಲಿಸಿದರು. ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದರುವ ಡೆಲ್ಲಿ ತಂಡವು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೆಂಕ್ರೆ ಎಫ್‌ಸಿ ಕಾರ್ಬೆಟ್‌ ಎಫ್‌ಸಿಯೊಡನೆ ಗೋಲುರಹಿತ ಡ್ರಾ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.