ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯ: ಮೆಸ್ಸಿ ಮಿಂಚಿನಾಟ, ಉರುಗ್ವೆ ವಿರುದ್ಧ ಜಯ ಮಾಂಟಿವಿಡಿಯೊ: ಲಯೊನೆಲ್ ಮೆಸ್ಸಿ ಆಕರ್ಷಕ ಆಟದಲ್ಲಿ ಅರ್ಜೆಂಟಿನಾ ತಂಡವು ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟಿನಾ 3–0ಯಿಂದ ಉರುಗ್ವೆ ವಿರುದ್ಧ ಜಯಿಸಿತು. ಅರ್ಜೆಂಟಿನಾದ ರಾಡ್ರಿಗೊ ಡಿ ಪಾಲ್ ಮತ್ತು ಲಾಟ್ರೊ ಮಾರ್ಟಿನೇಜ್ ಕೂಡ ಗೋಲು ಕಾಣಿಕೆ ನೀಡಿದರು. ಪಂದ್ಯಗಳ ಫಲಿತಾಂಶ: ಬೊಲಿವಿಯಾಕ್ಕೆ 1–0ಯಿಂದ ಪೆರುವಿನ ವಿರುದ್ಧ; ವೆನೆಜುವೆಲ್ 2–1ರಿಂದ ಈಕ್ವೆಡಾರ್ ವಿರುದ್ಧ; ಚಿಲಿ 2–0ಯಿಂದ ಪರಗ್ವೆ ವಿರುದ್ಧ ಜಯಿಸಿದವು. ಕೊಲಂಬಿಯಾ –ಬ್ರೆಜಿಲ್ ನಡುವಣ ಪಂದ್ಯವು ಗೋಲಿಲ್ಲದೇ ಡ್ರಾ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.