ಫುಟ್‌ಬಾಲ್‌: ಮಾಡರ್ನ್ ಗರ್ಲ್ಸ್‌ ತಂಡಕ್ಕೆ ಜಯ ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಮಾಡರ್ನ್ ಗರ್ಲ್ಸ್ ಎಫ್‌ಸಿ ತಂಡದವರು ಕೆಎಸ್‌ಎಫ್‌ಎ ಸ್ಪೋರ್ಟಿಂಗ್ ಪ್ಲಾನೆಟ್‌ ‘ಎ’ ಡಿವಿಷನ್‌ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿದರು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ 3–0ಯಿಂದ ಪಿಂಕ್ ಪ್ಯಾಂಥರ್ಸ್‌ ತಂಡವನ್ನು ಪರಾಭವಗೊಳಿಸಿದರು. ವಿಜೇತ ತಂಡದ ಪರ ಆರುಷಿ (30ನೇ ನಿಮಿಷ), ರಿವಾಕಾ (41ನೇ ನಿಮಿಷ) ಮತ್ತು ಟೆರಿಯಾ (49ನೇ ನಿಮಿಷ) ಕಾಲ್ಚಳಕ ತೋರಿದರು. ಮತ್ತೊಂದು ಪಂದ್ಯದಲ್ಲಿ ಪಯೋನಿಯರ್ ಎಫ್‌ಸಿ 1–0ಯಿಂದ ಸಾಯಿ ಸ್ಪೋರ್ಟ್ಸ್ ಅಕಾಡೆಮಿ ತಂಡವನ್ನು ಮಣಿಸಿತು. ಪಯೋನಿಯರ್ ಪರ ಸತ್ಯಾ (11ನೇ ನಿಮಿಷ) ಗೋಲು ದಾಖಲಿಸಿದರು. ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಪಿಎಎಸ್‌ಎಸ್ ಎಫ್‌ಸಿ– ರೂಟ್ಸ್ ಎಫ್‌ಸಿ ತಂಡಗಳು ಆಡಲಿದ್ದರೆ, ಎರಡನೇ ಪಂದ್ಯದಲ್ಲಿ ಜಿಆರ್‌ಕೆ ಎಫ್‌ಸಿ– ಯುನೈಟೆಡ್‌ ಎಫ್‌ಸಿ ಕೊಡಗು ತಂಡಗಳು ಪೈಪೋಟಿ ನಡೆಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.