ಫುಟ್‌ಬಾಲ್‌: ಬೆಂಗಳೂರು ಮೂನ್‌ ತಂಡಕ್ಕೆ ಗೆಲುವು ಬೆಂಗಳೂರು: ಕ್ರೀಡಾ ಶಾಲೆ ಮತ್ತು ಬೆಂಗಳೂರು ಮೂನ್ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆಯ ಆಶ್ರಯದ ‘ಸಿ’ ಡಿವಿಷನ್‌ನ ಫುಟ್‌ಬಾಲ್‌ ಲೀಗ್‌ನಲ್ಲಿ ಶನಿವಾರ ಭರ್ಜರಿ ಜಯ ಗಳಿಸಿದವು. ಡ್ರೀಮ್ ಟೀಮ್ ಸ್ಪೋರ್ಟ್ಸ್‌ ಮತ್ತು ಎಫ್‌ಎಸ್‌ವಿ ಅರೆನಾ ಸಹಯೋದಲ್ಲಿ ನೆಯುತ್ತಿರುವ ಟೂರ್ನಿಯ ‘ಸಿ’ ಗುಂಪಿನ ಪಂದ್ಯದಲ್ಲಿ ಕ್ರೀಡಾ ಶಾಲೆ ತಂಡ 4–0ಯಿಂದ ಹೈದ್ರಾ ವಿರುದ್ಧ ಜಯ ಗಳಿಸಿತು. ಕುನಾಲ್ (39 ಮತ್ತು 59ನೇ ನಿ), ನಿರ್ಮಾನ್ಯು ಅತ್ರಿ (50 ಮತ್ತು 58ನೇ ನಿ) ಗೋಲು ಗಳಿಸಿದರು. ‘ಎ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಮೂನ್ 3–1ರಲ್ಲಿ ಬೆಂಗಳೂರು ಪ್ರೀಮಿಯರ್ ಸ್ಕೂಲ್ ಎದುರು ಜಯ ಗಳಿಸಿತು. ಮೂನ್ ಪರವಾಗಿ 12ನೇ ನಿಮಿಷದಲ್ಲಿ ಅಡಾನನ್‌, 18ನೇ ನಿಮಿಷದಲ್ಲಿ ವಿಮಲ್‌, 34ನೇ ನಿಮಿಷದಲ್ಲಿ ಶೆರಟಾನ್ ಗೋಲು ಗಳಿಸಿದರು. ಪ್ರೀಮಿಯರ್ ತಂಡದ ಏಕೈಕ ಗೋಲು ಸಮನ್ಯು ಅವರಿಂದ ಮೂಡಿಬಂತು. ‘ಬಿ’ ಗುಂಪಿನ ಪಂದ್ಯದಲ್ಲಿ ಮೈಸೂರು ವಿಜಯನಗರ ಎಫ್‌ಸಿ ತಂಡ 1–0ಯಿಂದ ಬಿವೈಎಫ್‌ಎಲ್‌ ವಿರುದ್ಧ ಜಯ ಗಳಿಸಿತು. ಪಂದ್ಯದ ಏಕೈಕ ಗೋಲು ಗಳಿಸಿದವರು ಸಚ್ಚಿದಾನಂದ (4ನೇ ನಿಮಿಷ). ಭಾನುವಾರ ಬೆಳಿಗ್ಗೆ 10.30ಕ್ಕೆ ರೊನಾಲ್ಡೊ ಎಫ್‌ಸಿ ಮತ್ತು ಬೆಂಗಳೂರು ಪ್ಯಾಂಥರ್ಸ್ ಎಫ್‌ಸಿ, 12 ಗಂಟೆಗೆ ರೆಬೆಲ್ಸ್ ಫೀನಿಕ್ಸ್‌ ಎಫ್‌ಸಿ ಮತ್ತು ಮಹೇಶ್ ರಾಜ್‌ ಯುನೈಟೆಡ್‌ ಎಫ್‌ಸಿ, ಮಧ್ಯಾಹ್ನ 1.30ಕ್ಕೆ ಬೊಯ್ಕಾ ಅಕಾಡೆಮಿ ಮತ್ತು ಬೆಂಗಳೂರು ಚಾಂಪಸ್‌, 3 ಗಂಟೆಗೆ ರೂಟ್ಸ್ ಎಫ್‌ಸಿ ಹಾಗೂ ರಾಮನ್ ಸ್ಪೋರ್ಟ್ಸ್‌ ಅಕಾಡೆಮಿ ಮತ್ತು 4.30ಕ್ಕೆ ಫುಟ್‌ಬಾಲ್ ಅಕಾಡೆಮಿ ಆಫ್ ಬೆಂಗಳೂರು ಹಾಗೂ ಬ್ಲ್ಯಾಕ್ ಪ್ಯಾಂಥರ್ಸ್ ತಂಡಗಳು ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.