ಮಹಿಳಾ ಫುಟ್‌ಬಾಲ್: ಕೊಡಗು, ರೂಟ್ಸ್‌ ಜಯಭೇರಿ ಬೆಂಗಳೂರು: ಯುನೈಟೆಡ್ ಎಫ್‌ಸಿ ಕೊಡಗು ಮತ್ತು ರೂಟ್ಸ್‌ ಫುಟ್‌ಬಾಲ್ ಸ್ಕೂಲ್ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸ್ಪೋರ್ಟಿಂಗ್‌ ಪ್ಲಾನೆಟ್ ಟ್ರೋಫಿಗಾಗಿರುವ ಮಹಿಳೆಯರ ‘ಎ’ ಡಿವಿಷನ್ ಲೀಗ್‌ನಲ್ಲಿ ಶನಿವಾರ ರೋಚಕ ಜಯ ಸಾಧಿಸಿದವು. ಗುಂಪು ಎರಡರ ಪಂದ್ಯದಲ್ಲಿ ಜಯಶ್ರೀ ಧಾಮ (34ನೇ ನಿಮಿಷ) ಗಳಿಸಿದ ಏಕೈಕ ಗೋಲಿನ ನೆರವಿನಿಂದ ಕೊಡಗು ತಂಡ ಜಿಆರ್‌ಕೆ ಎಫ್‌ಸಿಯನ್ನು 1–0 ಅಂತರದಲ್ಲಿ ಮಣಿಸಿತು. ರೂಟ್ಸ್‌ ತಂಡ ಪಾಸ್ ಎಫ್‌ಸಿ ಎದುರಿನ ಪಂದ್ಯದಲ್ಲಿ 1–0 ಅಂತರದಿಂದ ಗೆಲುವು ಸಾಧಿಸಿತು. 58ನೇ ನಿಮಿಷದಲ್ಲಿ ಸಂಜನಾ ಅವರು ಗೆಲುವಿನ ಗೋಲು ದಾಖಲಿಸಿದರು. ಭಾನುವಾರ ಮಧ್ಯಾಹ್ನ 2.30ಕ್ಕೆ ಪಯನಿಯರ್ ವಿಮೆನ್ಸ್ ಎಫ್‌ಸಿ ಮತ್ತು ಪಿಂಕ್‌ ಪ್ಯಾಂಥರ್ಸ್‌, ಸಂಜೆ 4 ಗಂಟೆಗೆ ಸಾಯಿ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಮಾಡರ್ನ್ ಗರ್ಲ್ಸ್ ಎಫ್‌ಸಿ ತಂಡಗಳು ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.