‌ಸ್ಟಾಫರ್ಡ್‌ ಕಪ್‌: ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ಕಿರೀಟ ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದವರು ಸ್ಟಾಫರ್ಡ್‌ ಚಾಲೆಂಜ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಕೆಎಸ್‌ಎಫ್‌ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯ ದಲ್ಲಿ ಬೆಂಗಳೂರಿನ ತಂಡ 2–1 ಗೋಲುಗಳಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿತು. ಜಿದ್ದಾಜಿದ್ದಿನ ಪೈಪೋಟಿ ನಡೆದ ಪಂದ್ಯದ 31ನೇ ನಿಮಿಷದಲ್ಲಿ ವಿನಿಲ್‌ ಪೂಜಾರಿ ಅವರು ಎಫ್‌ಸಿಬಿಯುಗೆ ಮುನ್ನಡೆ ತಂದಿತ್ತರು. ಫ್ರೀ ಕಿಕ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು. ಎರಡನೇ ಅವಧಿಯಲ್ಲಿ ಸೆಂಥಾಮಿಲ್ (71ನೇ ನಿ.) ಅವರು ಗೋಲು ಗಳಿಸಿ ಚೆನ್ನೈಯಿನ್‌ ತಂಡ ಸಮಬಲ ಗಳಿಸಲು ನೆರವಾದರು. ಆದರೆ ಸ್ಟಾಪೇಜ್‌ ಅವಧಿಯಲ್ಲಿ ಇರ್ಫಾನ್‌ ಯಾದವಾಡ (90+3ನೇ ನಿ.) ಅವರು ಗೋಲು ಗಳಿಸಿ ಬಿಯುಎಫ್‌ಸಿಗೆ ರೋಚಕ ಗೆಲುವು ತಂದುಕೊಟ್ಟರು. ವಿಜೇತ ತಂಡ ಟ್ರೋಫಿ ಹಾಗೂ ₹ 2.50 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡರೆ, ರನ್ನರ್ಸ್‌ ಅಪ್‌ ತಂಡ ₹ 1.50 ಲಕ್ಷ ನಗದು ಬಹುಮಾನ ಪಡೆದುಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.