ಫುಟ್‌ಬಾಲ್: ರಾಬರ್ಟೊ ಸಲ್ಹಾ ಮಿಂಚು ವಾಟ್‌ಫೋರ್ಡ್: ಮೊಹಮ್ಮದ್ ಸಲ್ಹಾ ಗಳಿಸಿದ ವೈಯಕ್ತಿಕ ಗೋಲು ಮತ್ತು ರಾಬರ್ಟೊ ಫಿರ್ಮಿನೊ ಮಾಡಿದ ಹ್ಯಾಟ್ರಿಕ್‌ನಿಂದಾಗಿ ಲಿವರ್‌ಪೂಲ್ ತಂಡವು ಜಯಭೇರಿ ಗಳಿಸಿತು. ಶನಿವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಲಿವರ್‌ಪೂಲ್ ತಂಡವು 5–0ಯಿಂದ ಕ್ಲಾಡಿಯೊ ರಾನೀರಿಸ್ ವಾಟ್‌ಫೋರ್ಡ್‌ ತಂಡದ ವಿರುದ್ಧ ಜಯಿಸಿತು. ಪಂದ್ಯದ ಅರಂಭದಿಂದಲೂ ವಾಟ್‌ಫೋರ್ಡ್ ತಂಡದ ರಕ್ಷಣಾ ಪಡೆಯನ್ನು ಸಲ್ಹಾ ಕಾಡಿದರು. ಇನ್ನೊಂದು ಕಡೆ ಫಿರ್ಮಿನೊ ಅವರ ಚುರುಕಿನ ಆಟದ ಮುಂದೆ ಎದುರಾಳಿ ತಂಡವು ಬಸವಳಿಯಿತು. ಅವರು ಹೊಡೆದ ಮೂರು ಗೋಲುಗಳಿಂದಾಗಿ ವಾಟ್‌ಫೋರ್ಡ್ ರಕ್ಷಣಾ ಕೋಟೆ ಛಿದ್ರವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.