ದಕ್ಷಿಣ ಡರ್ಬಿ: ಹೈದರಾಬಾದ್‌ಗೆ ಚೆನ್ನೈ ಸವಾಲು ಬ್ಯಾಂಬೊಲಿಮ್‌: ಎರಡು ಬಾರಿಯ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿಯು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗಳವಾರ ಹೈದರಾಬಾದ್‌ ಎಫ್‌ಸಿಯನ್ನು ಎದುರಿಸಲಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಸಾಮರ್ಥ್ಯ ತೋರಿದ್ದ ಚೆನ್ನೈಯಿನ್‌, ಈ ಬಾರಿ ಹೊಸ ಕೋಚ್‌ ಬೊಜಿದಾರ್‌ ಬ್ಯಾಂಡೊವಿಚ್‌ ಮತ್ತು ಹೊಸ ನಾಯಕ ಅನಿರುದ್ಧ ಥಾಪಾ ಅವರ ನೇತೃತ್ವದಲ್ಲಿ ಉತ್ತಮ ಸಾಮರ್ಥ್ಯ ತೋರುವ ಉತ್ಸಾಹದಲ್ಲಿದೆ. ಪ್ರಮುಖ ಮಿಡ್‌ಫೀಲ್ಡರ್ ರಫೇಲ್‌ ಕ್ರಿವಲೆರೊ ಅವರು ಗಾಯದ ಹಿನ್ನೆಲೆಯಲ್ಲಿ ಆಡುತ್ತಿಲ್ಲ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು ಚೆನ್ನೈ ತಂಡಕ್ಕೆ ಕಳವಳಕ್ಕೆ ಕಾರಣವಾಗಿದೆ. ಬಲಿಷ್ಠ ಎದುರಾಳಿಯ ವಿರುದ್ಧ ಹೈದರಾಬಾದ್ ಕೂಡ ಸವಾಲಿಗೆ ಸಿದ್ಧವಾಗಿದೆ. ಬಾರ್ತೊಲೊಮಿವ್ ಒಗ್ಬೆಚೆ, ಎಡು ಗಾರ್ಸಿಯಾ, ಜುವಾನನ್‌ ಹೈದರಾಬಾದ್ ತಂಡದ ಶಕ್ತಿಯಾಗಿದ್ದು, ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.