ಮಹಿಳಾ ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ ಶುಭಾರಂಭ ಬೆಂಗಳೂರು: ಹಾಲಿ ಚಾಂಪಿಯನ್‌ ಕಿಕ್ ಸ್ಟಾರ್ಟ್ ಎಫ್‌ಸಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದ ಮಹಿಳಾ ಫುಟ್‌ಬಾಲ್ ಲೀಗ್‌ನಲ್ಲಿ ಶುಭಾರಂಭ ಮಾಡಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ 5–0ಯಿಂದ ಬೆಂಗಳೂರು ಸಾಕರ್ ಗ್ಯಾಲಕ್ಸಿಯನ್ನು ಮಣಿಸಿತು. ಸಿಬಾನಿ ಶರ್ಮಾ (12ನೇ ನಿಮಿಷ), ಆರುಷಿ ಸಂತೋಷ್ (29ನೇ ನಿ), ನಿರ್ಮಲಾ ದೇವಿ (41ನೇ ನಿ), ಮಾರ್ಗರೆಟ್ ದೇವಿ (45ನೇ ನಿ) ಮತ್ತು ಸುಶ್ಮಿತಾ ಲೇಪ್ಚ (89ನೇ ನಿ) ಗೋಲು ಗಳಿಸಿದರು. ಮಿಸಾಕ ಎಫ್‌ಸಿ ಮತ್ತು ಬೆಂಗಳೂರು ಯುನೈಟೆಡ್ ಎಫ್‌ಸಿ ತಂಡಗಳು ಕೂಡ ಗೆಲುವು ಸಾಧಿಸಿದವು. ಮಿಸಾಕ ಎಫ್‌ಸಿ 4–0ಯಿಂದ ಸ್ಲಾಮ್ಸರ್ಸ್‌ ಬೆಳಗಾಂ ತಂಡವನ್ನು ಮಣಿಸಿತು. ಲಾಲ್‌ಬಿಯಕ್ ಡಿಕಿ (27ನೇ ನಿ), ಲಾಲ್‌ರಿಮ್ವಾನಿ (50ನೇ ನಿ), ಲಾಲ್‌ತಂಗ್‌ಸಾಂಗಿ (83, 87ನೇ ನಿ) ಗೋಲು ಗಳಿಸಿದರು. ಬೆಂಗಳೂರು ಯುನೈಟೆಡ್ ಎಫ್‌ಸಿ 3–1ರಲ್ಲಿ ರೆಬಲ್ಸ್‌ ವಿಮೆನ್ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತು. ಬೆಂಗಳೂರು ಯುನೈಟೆಡ್ ಪರ ಹುಸೈನಾ ಲೋಧ್ಗರ್‌ (22, 68ನೇ ನಿ), ಸನ್‌ಫಿಡ ನೊಂಗ್ರುಮ್ (84ನೇ ನಿ) ಹಾಗೂ ರೆಬೆಲ್ಸ್‌ಗಾಗಿ ಅದಿಕಾ ತತೋಬ ಭೋಸಲೆ (45+2ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು. ಮಾತೃ ಪ್ರತಿಷ್ಠಾನ ಎಫ್‌ಸಿ ಮತ್ತು ಬೆಂಗಳೂರು ಬ್ರೇವ್ಸ್‌ ಎಫ್‌ಸಿ ನಡುವಿನ ಪಂದ್ಯ ಗೋಲುರಹಿತ ಸಮಹಬಲದಲ್ಲಿ ಮುಕ್ತಾಯಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.