ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ ‌ಬೆಂಗಳೂರು: ಪಂದ್ಯದ ಕೊನೆಯ ಹಂತದ ಒಂದೇ ನಿಮಿಷದಲ್ಲಿ ಎರಡು ಗೋಲು ಬಿಟ್ಟುಕೊಟ್ಟ ಬೆಂಗಳೂರು ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ನಿರಾಶೆಗೆ ಒಳಗಾಯಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಿಎಫ್‌ಸಿ ಮತ್ತು ಬೆಂಗಳೂರು ಯುನೈಟೆಡ್‌ ಎಫ್‌ಸಿ ನಡುವಿನ ಪಂದ್ಯ 2–2ರಲ್ಲಿ ಡ್ರಾ ಆಯಿತು. 21 ವರ್ಷದೊಳಗಿನ ಆಟಗಾರ ಮಾರ್ಕರ್ಟನ್ ಲೂಯಿಸ್ ನಿಕ್ಸನ್ 18ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಬಿಎಫ್‌ಸಿ ಮುನ್ನಡೆ ಸಾದಿಸಿತು. 26ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರಾಬಿನ್ ಯಾದವ್ ಮುನ್ನಡೆಯನ್ನು ಹೆಚ್ಚಿಸಿದರು. ಆದರೆ ತಂಡಕ್ಕೆ 76ನೇ ನಿಮಿಷದಲ್ಲಿ ನಿರಾಶೆ ಕಾದಿತ್ತು. ರೊನಾಲ್ಡೊ ಆಗಸ್ಟೊ ಆಂಟೊನಿಯೊ ಮತ್ತು ಕಿನ್ಶುಕ್ ದೆಬಾನಾಥ್ ಸತತ ಗೋಲುಗಳ ಮೂಲಕ ಬಿಯುಎಫ್‌ಸಿಗೆ ಸಮಬಲ ತಂದುಕೊಟ್ಟರು. ಶುಕ್ರವಾರ ಬೆಳಿಗ್ಗೆ 11.45ಕ್ಕೆ ನಡೆಯಲಿರುವ ಪಂದ್ಯದಲ್ಲಿ ಎಡಿಇ ಎಫ್‌ಸಿ ಮತ್ತು ಬೆಂಗಳೂರು ಡ್ರೀಮ್ ಯುನೈಟೆಡ್‌ ಎಫ್‌ಸಿ ತಂಡಗಳು ಸೆಣಸಲಿವೆ. ಮಧ್ಯಾಹ್ನ 1.45ಕ್ಕೆ ಯಂಗ್ ಚಾಲೆಂಜರ್ಸ್ ಎಫ್‌ಸಿ ಮತ್ತು ಕೊಡಗು ಎಫ್‌ಸಿ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.