ಕಿಲಿಯನ್ ಬಾಪೆ ಗೋಲುಗಳ ಶತಕ ಪ್ಯಾರಿಸ್‌: ಫ್ರಾನ್ಸ್‌ನ ಫಾರ್ವರ್ಡ್ ಆಟಗಾರ ಕೈಲಿಯನ್ ಬಾಪೆ ಅವರು ಲೀಗ್‌–1ನಲ್ಲಿ ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‌ಜಿ) ತಂಡದ ಪರವಾಗಿ 100 ಗೋಲು ಗಳಿಸಿದ ಸಾಧನೆ ಮಾಡಿದರು‌. ಪಾರ್ಕ್ ಡಿಸ್ ಪ್ರಿನ್ಸಸ್‌ನಲ್ಲಿ ಶನಿವಾರ ರಾತ್ರಿ ನಡೆದ ಮೊನ್ಯಾಕೊ ಎದುರಿನ ಪಂದ್ಯದಲ್ಲಿ ಬಾಪೆ ಅವರ ಎರಡು ಗೋಲುಗಳ ಬಲದಿಂದ ಪಿಎಸ್‌ಜಿ 2–0ಯಿಂದ ಜಯ ಗಳಿಸಿತು. 12ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಬಾಪೆ ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು. ವೃತ್ತಿಜೀವನದ ಆರಂಭದಲ್ಲಿ ಮೊನ್ಯಾಕೊ ಪರವಾಗಿ ಆಡಿದ್ದ ಬಾಪೆ ಆ ತಂಡದ ಪರವಾಗಿ 16 ಗೋಲು ಗಳಿಸಿದ್ದರು. ಶನಿವಾರದ ಜಯದೊಂದಿಗೆ ಪಿಎಸ್‌ಜಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿತು. ಆಡಿರುವ 18 ಪಂದ್ಯಗಳ ಪೈಕಿ 14ರಲ್ಲಿ ಜಯಿಸಿರುವ ತಂಡ ಮೂರರಲ್ಲಿ ಡ್ರಾ ಸಾಧಿಸಿದೆ. ತಂಡದ ಖಾತೆಯಲ್ಲಿ ಒಟ್ಟು 45 ಪಾಯಿಂಟ್‌ಗಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.