ಫುಟ್‌ಬಾಲ್‌: ಡ್ರೀಮ್ ಯುನೈಟೆಡ್‌ ಜಯಭೇರಿ ಬೆಂಗಳೂರು: ನಿಮಾ ಲೆಪ್‌ಚಾ ಅವರು ಪೆನಾಲ್ಟಿ ಅವಕಾಶದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಡ್ರೀಮ್ ಯುನೈಟೆಡ್‌ ಎಫ್‌ಸಿ ತಂಡವು ಜಯ ಗಳಿಸಿತು. ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ 1–0ಯಿಂದ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಿಮಾ 88ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಇನ್ನೊಂದು ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್ ಎಫ್‌ಸಿ 1–0ಯಿಂದ ಕೊಡಗು ಎಫ್‌ಸಿಯನ್ನು ಸೋಲಿಸಿತು. ವಿಜೇತ ತಂಡದ ಗಾಡ್ವಿನ್‌ ಅಯೊಡೇಲ್‌ 48ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಶನಿವಾರ ನಡೆಯುವ ಪಂದ್ಯಗಳಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌– ಥಾಂಕೊ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ, ಬೆಂಗಳೂರು ಈಗಲ್ಸ್ ಎಫ್‌ಸಿ– ಕಿಕ್‌ಸ್ಟಾರ್ಟ್‌ ಎಫ್‌ಸಿ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.