ಅಂತರರಾಷ್ಟ್ರೀಯ ತ್ರಿಕೋನ ಟೂರ್ನಿ: ಫುಟ್‌ಬಾಲ್ ತಂಡದಲ್ಲಿ 23 ಆಟಗಾರರು ಕೋಲ್ಕತ್ತ: ಕೋಚ್ ಐಗೋರ್ ಸ್ಟಿಮ್ಯಾಚ್ ಅವರು ಮಂಗಳವಾರ ಭಾರತ ಸಂಭವನೀಯರ ಫುಟ್‌ಬಾಲ್ ತಂಡವನ್ನು ಪ್ರಕಟಿಸಿದರು. ಇದರಲ್ಲಿ 23 ಆಟಗಾರರು ಸ್ಥಾನ ಪಡೆದಿದ್ದಾರೆ. ಬುಧವಾರ ಇಲ್ಲಿ ಆರಂಭವಾಗಲಿರುವ ಐದು ದಿನಗಳ ಶಿಬಿರದಲ್ಲಿ ತಂಡವು ಭಾಗವಹಿಸಲಿದೆ. ಮಾರ್ಚ್ 22 ರಿಂದ 28ರವರೆಗೆ ಖುಮಾನ್ ಲಂಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ತ್ರಿಕೋನ ಟೂರ್ನಿಯಲ್ಲಿ ತಂಡವು ಆಡಲಿದೆ. ಈ ಟೂರ್ನಿಯಲ್ಲಿ ಮ್ಯಾನ್ಮಾರ್ ಹಾಗೂ ಕಿರ್ಗಿಸ್ ಗಣರಾಜ್ಯ ತಂಡಗಳೂ ಸ್ಪರ್ಧಿಸಲಿವೆ. ಸಂಭವನೀಯ ತಂಡ: ಗೋಲ್‌ಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ಪೂರ್ಬ ಲಚೆಂಪಾ ತೆಂಪಾ, ಅಮರಿಂದರ್ ಸಿಂಗ್. ಡಿಫೆಂಡರ್ಸ್: ಸಂದೇಶ್ ಜಿಂಗಾನ, ರೋಷನ್ ಸಿಂಗ್, ಅನ್ವರ್ ಅಲಿ, ಆಕಾಶ್ ಮಿಶ್ರಾ, ಚಿಂಗ್ಲೆನ್‌ಸಾನಾ ಕೊನಶಾಮ್, ರಾಹುಲ್ ಭೆಕೆ, ಮೆಹತಾಬ್ ಸಿಂಗ್, ಗ್ಲ್ಯಾನ್ ಮಾರ್ಟಿನ್ಸ್. ಮಿಡ್‌ಫೀಲ್ಡರ್ಸ್: ಸುರೇಶರ್ ವಾಂಗ್ಲೆಮ್, ರೋಹಿತ್ ಕುಮಾರ್, ಅನಿರುದ್ಧ ಥಾಪಾ, ಬ್ರೆಂಡನ್ ಫರ್ನಾಂಡಿಸ್, ಯಾಸೀರ್ ಮೊಹಮ್ಮದ್, ಋತ್ವಿಕ್ ದಾಸ್, ಜೀಕ್ಸನ್ ಸಿಂಗ್, ಲಾಲಂಜುವಾಲಾ ಚಾಂಗ್ಟೆ, ಬಿಪಿನ್ ಸಿಂಗ್, ಫಾರ್ವರ್ಡ್ಸ್: ಮನವೀರ್ ಸಿಂಗ್, ಸುನೀಲ್ ಚೇಟ್ರಿ, ಶಿವಶಕ್ತಿ ನಾರಾಯಣನ್. ಮಿಸಲು ಆಟಗಾರರು: ವಿಶಾಲ್ ಕೈಥ್, ಪ್ರಭಸುಕನ್ ಗಿಲ್, ಶುಭಾಶಿಶ್ ಬೋಸ್, ಪ್ರೀತಂ ಕೊಟಾಲ, ಆಶಿಶ್ ರೈ, ನರೇಂದ್ರ ಗೆಹ್ಲೋಟ್, ಲಿಸ್ಟನ್ ಕೊಲಾಕೊ, ನಿಖಿಲ್ ಪೂಜಾರಿ, ಸೆಹಲ್ ಅಬ್ದುಲ್ ಸಮದ್, ನಾರೆಮ್ ಮಹೇಶ್ ಸಿಂಗ್, ಇಸಾನ್ ಪಂಡಿತ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.