ಯೂತ್ ಪ್ರೀಮಿಯರ್ ಲೀಗ್‌: ವಿವಾನ್ ಹ್ಯಾಟ್ರಿಕ್ ಬೆಂಗಳೂರು: ವಿವಾನ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬಿಬಿಎಫ್‌ಎಸ್ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಅಶ್ರಯದ ಯೂತ್ ಲೀಗ್‌ನಲ್ಲಿ ಭರ್ಜರಿ ಜಯ ಗಳಿಸಿತು. ಭಾನುವಾರ ನಡೆದ 12 ವರ್ಷದೊಳಗಿನವರ ಪಂದ್ಯದಲ್ಲಿ ಬಿಬಿಎಸ್‌ಎಫ್‌ 5–1ರಲ್ಲಿ ಬಿಎಫ್‌ಸಿಯನ್ನು ಮಣಿಸಿತು. ಬಿಬಿಎಫ್‌ಎಸ್ ತಂಡಕ್ಕಾಗಿ ಸನಾರಾಯ್ ಮೊದಲ ನಿಮಿಷದಲ್ಲೇ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 15, 19 ಮತ್ತು 37ನೇ ನಿಮಿಷದಲ್ಲಿ ವಿವಾನ್ ಚೆಂಡನ್ನು ಗುರಿ ಮುಟ್ಟಿಸಿದರು. 62ನೇ ನಿಮಿಷದಲ್ಲಿ ಶ್ರೇಹಿತ್ ಗೋಲು ಗಳಿಸಿದರು. ಬಿಎಫ್‌ಸಿಯ ಏಕೈಕ ಗೋಲು ರಾಹುಲ್ (68ನೇ ನಿ) ಅವರಿಂದ ಬಂತು. 17 ವರ್ಷದೊಳಗಿನವರ ಪಂದ್ಯದಲ್ಲಿ ಬಿಬಿಎಫ್‌ಎಸ್‌ 2–0ಯಿಂದ ಬಿಸಿಎಯನ್ನು ಮಣಿಸಿತು. ಶ್ರವಣ್ (28ನೇ ನಿ) ಮತ್ತು ಅದ್ಮಿತ್ ಸೋನಿ (87ನೇ ನಿ) ಗೋಲು ಗಳಿಸಿದರು. ಟಿಎಸ್‌ಎಸ್‌ 3–2ರಲ್ಲಿ ಬಿಐಎಫ್‌ಎಯನ್ನು ಸೋಲಿಸಿತು. ಟಿಎಸ್‌ಎಸ್‌ಗಾಗಿ ಕುನಾಲ್ ರಾಘವ್ (45ನೇ ನಿ), ನಿರ್ಮಯನು ಅತ್ರಿ (52, 90ನೇ ನಿ) ಗೋಲು ಗಳಿಸಿದರೆ ಬಿಐಎಫ್‌ಎಗಾಗಿ ತನಿಶ್‌ ತಮ್ಮಣ್ಣ (54ನೇ ನಿ), ರಜತ್‌ (8ನೇ ನಿ) ಗೋಲು ಗಳಿಸಿದರು. ಬಿವೈಎಫ್‌ಎಲ್‌ 5–1ರಲ್ಲಿ ಬೋಕಾ ಎಲ್ಲೋವನ್ನು ಮಣಿಸಿತು. ಅಭಿಷೇಕ್‌ (18, 55ನೇ ನಿ), ನಮ್ರಿಂಗ್‌ (40, 88ನೇ ನಿ) ಮತ್ತು ಸಮ್‌ಸ್ವಾಯಿ (66ನೇ ನಿ) ಬಿವೈಎಫ್‌ಎಲ್‌ಗಾಗಿ, ಸಂಫ್ರಂಗ್‌ (60ನೇ ನಿ) ಬೋಕಾ ತಂಡಕ್ಕಾಗಿ ಗೋಲು ಗಳಿಸಿದರು. ಎಫ್‌ಎಬಿ 6–0ಯಿಂದ ಬಿಬಿಎಫ್ಎಸ್‌ ಸ್ನೈಪರ್ ತಂಡವನ್ನು ಮಣಿಸಿತು. ಜೋಮೋನ್ ಜೇಕಬ್‌ (1, 52, 68ನೇ ನಿ), ಶಿವಾನಂದ (48ನೇ ನಿ), ಅಂಶ್‌ ಮಿಶ್ರಾ (58ನೇ ನಿ) ಮತ್ತು ಫೈಜನ್ (70ನೇ ನಿ) ಗೋಲು ಗಳಿಸಿದರು. 12 ವರ್ಷದೊಳಗಿನವರ ಮತ್ತೊಂದು ಪಂದ್ಯದಲ್ಲಿ ರೂಟ್ಸ್ ಎಫ್‌ಎಸ್‌ 2–0ಯಿಂದ ಬಿಸಿಎಫ್‌ಸಿಯನ್ನು ಸೋಲಿಸಿತು. ರಾಹುಲ್ ಕಾರ್ತಿಕ್ (6ನೇ ನಿ) ಮತ್ತು ಅಗ್ರಿಮ್ ಅಯಾನ್ (65ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.