ಸುನಿಲ್ ಗೋಲು: ಬಿಎಫ್‌ಸಿ ಗೆಲುವು ವಾಸ್ಕೊ: ನಾಯಕ ಸುನಿಲ್ ಚೆಟ್ರಿ ಗಳಿಸಿದ ಸೊಗಸಾದ ಗೋಲಿನ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಶನಿವಾರ ಜಯ ಗಳಿಸಿತು. ಈ ಆವೃತ್ತಿಯಲ್ಲಿ ತನ್ನ ಕೊನೆಯ ಪಂದ್ಯವಾಡಿದ ಬಿಎಫ್‌ಸಿ ತಂಡವು 1–0ಯಿಂದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡಕ್ಕೆ ಸೋಲುಣಿಸಿತು. ಪಂದ್ಯದ 24ನೇ ನಿಮಿಷದಲ್ಲಿ ಯಾಯಾ ಬನಾನಾ ಅವರ ನೆರವಿನಿಂದ ಚೆಂಡು ಹಿಡಿತಕ್ಕೆ ಪಡೆದ ಚೆಟ್ರಿ ಟೂರ್ನಿಯಲ್ಲಿ ಒಟ್ಟು 51ನೇ ಗೋಲು ದಾಖಲಿಸಿದರು. ಭಾನುವಾರ ಬ್ಯಾಂಬೊಲಿಮ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವು ಕೇರಳ ಬ್ಲಾಸ್ಟರ್ಸ್ ಎದುರು ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.