ಫುಟ್‌ಬಾಲ್: ಬಹರೇನ್ ವಿರುದ್ಧ ಭಾರತಕ್ಕೆ ಸೋಲು ಮನಾಮ: ತನಗಿಂತ ಮೇಲಿನ ರ‍್ಯಾಂಕಿನ ಬಹರೇನ್ ತಂಡದ ವಿರುದ್ಧ ವೀರೋಚಿತ ಹೋರಾಟ ತೋರಿದ ಭಾರತ ಫುಟ್‌ಬಾಲ್ ತಂಡವು ಸ್ನೇಹಪರ ಪಂದ್ಯದಲ್ಲಿ ಸೋಲನುಭವಿಸಿತು. ಬುಧವಾರ ನಡೆದ ಹಣಾಹಣಿಯಲ್ಲಿ ಬಹರೇನ್‌ 2–1ರಿಂದ ಗೆಲುವು ಸಾಧಿಸಿತು. ಅಲ್‌ ಮುರಾಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಹರೇನ್ ಪರ 38ನೇ ನಿಮಿಷದಲ್ಲಿ ಮೊಹಮ್ಮದ್ ಅಲ್ ಹರ್ದಾನ್ ಮೊದಲ ಗೋಲು ಗಳಿಸಿದರು. ರಾಹುಲ್ ಭೆಕೆ 59ನೇ ನಿಮಿಷದಲ್ಲಿ ಗಳಿಸಿದ ಸೊಗಸಾದ ಹೆಡರ್‌ ಮೂಲಕ,ಭಾರತ ತಿರುಗೇಟು ನೀಡಿತು. ಆದರೆ ಮೆಹದಿ ಹುಮೈದನ್‌ 88ನೇ ನಿಮಿಷದಲ್ಲಿ ಕಾಲ್ಚಳಕ ತೋರಿ ಬಹರೇನ್ ತಂಡದ ಜಯ ಖಚಿತಪಡಿಸಿದರು. ವಿಶ್ವ ಕ್ರಮಾಂಕದಲ್ಲಿ ಬಹರೇನ್‌89ನೇ ಸ್ಥಾನದಲ್ಲಿದ್ದರೆ ಭಾರತ 104ನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.