ಬೆಂಗಳೂರು ಎಫ್‌ಸಿಗೆ ಯಾಯಾ ಬನಾನ ಬೆಂಗಳೂರು: ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫ್ರಾಂಚೈಸ್‌ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಮಂಗಳವಾರ ಕ್ಯಾಮರೂನ್‌ ದೇಶದ ಡಿಫೆಂಡರ್‌ ಯಾಯಾ ಬನಾನ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಐಎಸ್‌ಎಲ್‌ನ ಈ ಆವೃತ್ತಿ ಮುಗಿಯುವವರೆಗೆ ಅವರು ತಂಡದಲ್ಲಿರುತ್ತಾರೆ ಎಂದು ಫ್ರಾಂಚೈಸ್ ತಿಳಿಸಿದೆ. 30 ವರ್ಷದ ಯಾಯಾ ಇತ್ತೀಚೆಗೆ ಜೋರ್ಡಾನ್‌ ಪ್ರೊ ಲೀಗ್‌ನಲ್ಲಿ ಆಡಿದ್ದರು. ಗಬಾನ್‌ನ ರೊಂದು ಮೊಸಾವು ಕಿಂಗ್‌ ಗಾಯಗೊಂಡು ಬೆಂಗಳೂರು ಎಫ್‌ಸಿಯಿಂದ ಹೊರ ಗುಳಿದಿದ್ದು, ಅವರ ಸ್ಥಾನದಲ್ಲಿ ಯಾಯಾ ಆಡಲಿದ್ದಾರೆ. ಯಾಯಾ ಸೇರ್ಪಡೆ ಕುರಿತು ಮಾತ ನಾಡಿರುವ ಬಿಎಫ್‌ಸಿ ಕೋಚ್‌ ಮಾರ್ಕೊ ಪೆಜೌಲಿ ‘ಕೋವಿಡ್‌ ಕಾರಣದಿಂದ ಹಲವು ಆಟಗಾರರು ಅಲಭ್ಯರಾಗಿದ್ದಾರೆ. ಹೀಗಾಗಿ ಯಾಯಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ‘ ಎಂದಿದ್ದಾರೆ.ಸದ್ಯ ಐಎಸ್‌ಎಲ್ ಟೂರ್ನಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಬಿಎಫ್‌ಸಿ 4ನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.