‘ಹಿಜಾಬ್‌ ವಿವಾದ‘: ವಿಡಿಯೊ ಹಂಚಿಕೊಂಡ ಫುಟ್‌ಬಾಲ್ ಆಟಗಾರ ಪಾಲ್ ಪೊಗ್ಬಾ ಬೆಂಗಳೂರು: ಕರ್ನಾಟಕದಲ್ಲಿಪ್ರಸ್ತುತ ನಡೆಯುತ್ತಿರುವ ‘ಹಿಜಾಬ್– ಕೇಸರಿ ಶಾಲು ವಿವಾದ‘ಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಫುಟ್‌ಬಾಲ್ ತಂಡದ ಆಟಗಾರ ಪಾಲ್ ಪೊಗ್ಬಾ ವಿಡಿಯೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುವ ಪೊಗ್ಬಾ ಹಂಚಿಕೊಂಡಿರುವ ವಿಡಿಯೊಗೆ ‘ಭಾರತದಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆಯರಿಗೆ ಹಿಂದುತ್ವವಾದಿಗಳಿಂದ ಕಿರುಕುಳ ಮುಂದುವರಿದಿದೆ‘ ಎಂಬ ಶೀರ್ಷಿಕೆ ಇದೆ. ಆದರೆ ಈ ವಿಡಿಯೊದಲ್ಲಿ ದಾಖಲಾಗಿರುವುದು ಕರ್ನಾಟಕದಲ್ಲಿ ನಡೆದ ಘಟನೆಯೇ ಎಂಬುದು ಗೊತ್ತಾಗಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.