: ಕೇರಳ ಬ್ಲಾಸ್ಟರ್ಸ್‌ಗೆ ಬೆಂಗಾಲ್ ಸವಾಲು ವಾಸ್ಕೊ: ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿರುವ ಕೇರಳ ಬ್ಲಾಸ್ಟರ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಪುಟಿದೇಳುವ ವಿಶ್ವಾಸದಲ್ಲಿದ್ದು, ಸೋಮವಾರ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವನ್ನು ಎದುರಿಸಲಿದೆ. ಪ್ಲೇ ಆಫ್ ಲೆಕ್ಕಾಚಾರದಿಂದ ಬಹುತೇಕ ಹೊರಬಿದ್ದಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವು ಸಮಾಧಾನಕರ ಜಯಕ್ಕಾಗಿ ಪ್ರಯತ್ನಿಸಲಿದೆ.ಮುಂದಿನ ಎರಡು ಪಂದ್ಯಗಳಲ್ಲಿ,ಪಾಯಿಂಟ್ಸ್ ಪಟ್ಟಿಯಲ್ಲಿ ತನಗಿಂತ ಮೇಲಿರುವ ಎಟಿಕೆ ಮೋಹನ ಬಾಗನ್ ಮತ್ತು ಹೈದರಾಬಾದ್ ಎಫ್‌ಸಿ ಎದುರು ಕೇರಳ ತಂಡವು ಆಡಬೇಕಿರುವುದರಿಂದ ಈ ಹಣಾಹಣಿಯಲ್ಲಿ ಜಯ ಸಾಧಿಸಿ ಮೂರು ಪಾಯಿಂಟ್ಸ್ ಗಳಿಸುವ ಛಲದಲ್ಲಿದೆ. 14 ಪಂದ್ಯಗಳನ್ನು ಆಡಿರುವ ಕೇರಳ ತಂಡವು 23 ಪಾಯಿಂಟ್ಸ್ ಗಳಿಸಿದ್ದು, ಸದ್ಯ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈಸ್ಟ್ ಬೆಂಗಾಲ್ 10ನೇ ಸ್ಥಾನದಲ್ಲಿದೆ. ಪಂದ್ಯ ಆರಂಭ: ರಾತ್ರಿ 7.30 ನೇರ ‍ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.