ರಷ್ಯಾ-ಉಕ್ರೇನ್ ಸಂಘರ್ಷ: ಚಾಂಪಿಯನ್ಸ್ ಲೀಗ್ ಫೈನಲ್ ಫ್ರಾನ್ಸ್‌ಗೆ ಸ್ಥಳಾಂತರ ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಚಾಂಪಿಯನ್ಸ್ ಲೀಗ್ ಫೈನಲ್, ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಸ್ಟೇಡ್‌ ಡಿ ಫ್ರಾನ್ಸ್‌‌ಗೆ ಸ್ಥಳಾಂತರ ಮಾಡುವುದಾಗಿ ಐರೋಪ್ಯ ಫುಟ್ಬಾಲ್ ಸಂಸ್ಥೆಗಳಒಕ್ಕೂಟವು (ಯುಇಎಫ್‌ಎ) ಶುಕ್ರವಾರ ಘೋಷಿಸಿದೆ. ಉಕ್ರೇನ್ ಹಾಗೂ ರಷ್ಯನ್ ಕ್ಲಬ್‌ಗಳು ಸ್ಪರ್ಧಿಸುವ ಹೋಮ್ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದೆ. ಯುಇಎಫ್‌ಎ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಭದ್ರತೆಯ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯವು ಮೇ 28ರಂದು ನಿಗದಿಯಾಗಿದೆ. 2021/22 # -. 28 21:00 . ⬇️ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.