ಐಎಸ್‌ಎಲ್‌: ಜೆಮ್ಶೆಡ್‌ಪುರ ಜಯಭೇರಿ ಫತೋರ್ಡ: ಸಂಘಟಿತ ಆಟವಾಡಿದಜೆಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವುಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು. ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 3–2ರಿಂದ ನಾರ್ತ್ ಈಸ್ಟ್ ಯುನೈಟೆಡ್‌ ಎಫ್‌ಸಿ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಸಿಮಿನ್ಲೆಲ್ ಡಂಗೆಲ್‌ (35ನೇ ನಿಮಿಷ), ಗ್ರೇಗ್‌ ಸ್ಟೀವರ್ಟ್‌ (59ನೇ ನಿ.) ಮತ್ತು ಜೋರ್ಡಾನ್ ಮರೆ (84ನೇ ನಿ.) ಗೋಲು ದಾಖಲಿಸಿದರು. ನಾರ್ತ್ಈಸ್ಟ್ ತಂಡದ ಲಾಲ್ದನ್‌ಮಾವಿಯಾ ರಾಲ್ಟೆ (66ನೇ ನಿ.) ಮತ್ತು ಮಾರ್ಸೆಲೊ ಪೆರೆರಾ (67ನೇ ನಿ.) ಗೋಲು ಹೊಡೆದರು. ಕೇರಳಕ್ಕೆ ಸೆಮಿಫೈನಲ್ ಕನಸು: ವಾಸ್ಕೊದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಸೆಣಸಲಿವೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಕೇರಳ ಬ್ಲಾಸ್ಟರ್ಸ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಮತ್ತೊಂದು ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಎಫ್‌ಸಿ ಗೋವಾವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.