ಚಾಂಪಿಯನ್ಸ್ ಲೀಗ್ ಫುಟ್‌ಬಾಲ್: ಹ್ಯಾರಿ ಕೇನ್ ಡಬಲ್ ಗೋಲು ಮ್ಯಾಂಚೆಸ್ಟರ್‌: ಹ್ಯಾರಿ ಕೇನ್ ಗಳಿಸಿದ ಎರಡು ಗೋಲುಗಳ ಬಲದಿಂದ ಟೊಟೆನ್‌ಹ್ಯಾಮ್ ತಂಡವು ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಜಯಿಸಿತು. ಶನಿವಾರ ತಡರಾತ್ರಿ ಇತಿಹಾದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೊಟೆನ್‌ಹ್ಯಾಮ್ 3–2 ರಿಂದ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ರೋಚಕ ಜಯ ಸಾಧಿಸಿತು. ಪಂದ್ಯದ ನಾಲ್ಕನೇ ನಿಮಿಷದಲ್ಲಿ ಡೆಜಾನ್ ಕುಲುಸೆವಸ್ಕಿ ಗೋಲು ಗಳಿಸಿ, ಟೊಟೆನ್‌ಹ್ಯಾಮ್ ಖಾತೆ ತೆರೆದರು. ಮ್ಯಾಂಚೆಸ್ಟರ್ ತಂಡದ ಲೈಕೆ ಗೊಂಡೊಗಾನ್ (33ನೇ ನಿ) ತಿರುಗೇಟು ನೀಡಿದರು. ಇದರಿಂದ 1–1ರ ಸಮಬಲವಾಯಿತು. ಆದರೆ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ 59ನೇ ನಿಮಿಷದಲ್ಲಿ ಗೋಲು ಹೊಡೆದು ಟೊಟೆನಹ್ಯಾಮ್‌ಗೆ ಮತ್ತೆ ಮುನ್ನಡೆ ಗಳಿಸಿಕೊಟ್ಟರು. ಕೊನೆಯ ಹಂತದಲ್ಲಿ ದೊರೆತ ಪೆನಾಲ್ಟಿ (90+2ನಿ) ಯಲ್ಲಿ ರಿಯಾದ್ ಮೆಹ್ರೆಜ್ ಗೋಲು ಗಳಿಸಿದರು. ಮ್ಯಾಂಚೆಸ್ಟರ್‌ಗೆ 2–2ರ ಸಮಬಲ ಗಳಿಸಿಕೊಟ್ಟರು. ಆದರೆ, ಮತ್ತೆ ಮಿಂಚಿದ ಹ್ಯಾರಿ (90+5ನಿ) ಅಮೋಘ ಗೋಲು ಬಾರಿಸುವ ಮೂಲಕ ತಮ್ಮ ತಂಡದ ಮಡಿಲಿಗೆ ಗೆಲುವಿನ ಕಾಣಿಕೆ ಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.