ಫುಟ್‌ಬಾಲ್‌: ಎಚ್‌ಎಎಲ್‌ಗೆ ಭರ್ಜರಿ ಜಯ ಬೆಂಗಳೂರು: ಎಸ್‌.ಜಾನಿ ಕೋಮ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಚ್‌ಎಎಲ್‌ ಎಫ್‌ಸಿ ತಂಡವು ಬಿಡಿಎಫ್‌ಎ ಎ ಡಿವಿಷನ್‌ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್‌ 4–0ಯಿಂದ ಬ್ಲಿಟ್ಜ್‌ ಎಫ್‌ಸಿ ತಂಡವನ್ನು ಸೋಲಿಸಿತು. ಜಾನಿ 27 ಮತ್ತು 64ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ವಿಜೇತ ತಂಡದ ರಮಣ್‌ ಸಿಂಗ್‌ (34ನೇ ನಿಮಿಷ) ಮತ್ತು ತುಷಾರ್ ವಿಶ್ವಕರ್ಮ (72ನೇ ನಿ.) ತಲಾ ಒಂದು ಗೋಲು ಹೊಡೆದರು. ಇನ್ನುಳಿದ ಪಂದ್ಯಗಳಲ್ಲಿ ಪರಿಕ್ರಮ ಎಫ್‌ಸಿ 3–0ಯಿಂದ ಪೋಸ್ಟಲ್ ಡಿಪಾರ್ಟ್‌ಮೆಂಟ್‌ ಎಫ್‌ಸಿ ವಿರುದ್ಧ, ರೆಬೆಲ್ಸ್ ಎಫ್‌ಸಿ 1–0ಯಿಂದ ಎಜಿಒಆರ್‌ಸಿ ಎಫ್‌ಸಿ ವಿರುದ್ಧ, ಬಿಟಿಎಂ ಎಫ್‌ಸಿ 1–0ಯಿಂದ ಸೌತ್ ಯುನೈಟೆಡ್‌ ಎಫ್‌ಸಿ ಎದುರು ಜಯ ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.